ಟೆಕ್ಸಾಸ್: ಅಮೆರಿಕದಲ್ಲಿ ಮಂಗಳವಾರ ಸಂಜೆ ಸಂಭವಿಸಿದ ಭೀಕರ ಅಪಘಾತದಲ್ಲಿ ಆಂಧ್ರ ಪ್ರದೇಶದ ಶಾಸಕರೊಬ್ಬರ 6 ಮಂದಿ ಸಂಬಂಧಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಮುಮ್ಮಿಡಿವರಂ ಶಾಸಕ ಪಿ.ವೆಂಕಟ ಸತೀಶ್ ಕುಮಾರ್ ಅವರ ಸಂಬಂಧಿಕರಾದ ಆಂಧ್ರಪ್ರದೇಶದ ಕೋನಸೀಮಾ ಜಿಲ್ಲೆಯ ಅಮಲಾಪುರಂ ಪಟ್ಟಣದ ಆರು ಮಂದಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದು, ದುರ್ದೈವಿಗಳು ಪಿ.ನಾಗೇಶ್ವರ ರಾವ್, ಸೀತಾ ಮಹಾಲಕ್ಷ್ಮೀ, ನವೀನ, ಕೃತಿಕ್, ನಿಶಿತಾ ಮತ್ತು ಕುಟುಂಬದ ಇನ್ನೊಬ್ಬ ಸಂಬಂಧಿಯೂ ಎಂದು ಗುರುತಿಸಲಾಗಿದೆ.
ಟೆಕ್ಸಾಸ್ನ ಕ್ಲೆಬರ್ನ್ ನಗರದ ಫಾರ್ಮ್ ಟು ಮಾರ್ಕೆಟ್ ರಸ್ತೆಯ ಹೆದ್ದಾರಿ 67 ರಲ್ಲಿ ಇಬ್ಬರು ಪ್ರಯಾಣಿಕರಿದ್ದ ಟ್ರಕ್ಗೆ ಮುಖಾಮುಖಿ ಡಿಕ್ಕಿ ಹೊಡೆದಾಗ ಕಾರಿನಲ್ಲಿ ಏಳು ಜನರು ಪ್ರಯಾಣಿಸುತ್ತಿದ್ದರು. ಕಾರಿನಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಲೋಕೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಸ್ಥಿತಿ ಗಂಭೀರವಾಗಿದೆ ಎಂದು ಶಾಸಕ ಪಿ.ವೆಂಕಟ ಸತೀಶ್ ಕುಮಾರ್ ತಿಳಿಸಿದ್ದಾರೆ.