News Karnataka Kannada
Monday, April 29 2024
ಆರೋಗ್ಯ

ಮನೆಯಲ್ಲೇ ಮಾಡಿ ಸೇವಿಸಿ ಆರೋಗ್ಯಕರ ʼದಾಸವಾಳ ಟೀʼ

Hibiscus Tea
Photo Credit : Pixabay

ಜರ್ನಲ್ ಆಫ್ ನ್ಯೂಟ್ರಿಷನ್‌ನ ಅಧ್ಯಯನವು, ವಯಸ್ಕರು ಪ್ರತಿದಿನ ಮೂರು ಬಾರಿ ದಾಸವಾಳದ ಚಹಾವನ್ನು ಸೇವಿಸಿದ್ದರೆ ಅದರಲ್ಲಿನ ಅಂಶಗಳು ನಿಮ್ಮ ದೇಹದಲ್ಲಿನ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ದಾಸವಾಳದ ಚಹಾದ ದೈನಂದಿನ ಸೇವನೆಯು ಪೂರ್ವ ಮತ್ತು ಸ್ವಲ್ಪ ಅಧಿಕ ರಕ್ತದೊತ್ತಡದ ವಯಸ್ಕರಲ್ಲಿ ಬಿಪಿಯನ್ನು ಕಡಿಮೆ ಮಾಡುತ್ತದೆ ಮತ್ತು ಬಿಪಿಯನ್ನು ಹೊಂದಿರುವ ಜನರಿಗೆ ಶಿಫಾರಸು ಮಾಡಲಾಗಿದೆ ಎಂದು ಅಧ್ಯನದ ಮೂಲಕ ತಿಳಿದುಬಂದಿದೆ. ಇನ್ನು ಪ್ರತಿದಿನ ಒಂದು ಅಥವಾ ಎರಡು ಲೋಟ ದಾಸವಾಳದ ಚಹಾವನ್ನು ಸೇವಿಸುವುದರಿಂದ ನಿಮ್ಮ ಯಕೃತ್ತಿಗೆ ತೊಂದರೆಯಾಗುವುದಿಲ್ಲ. ಆದರೆ, ಹೆಚ್ಚು ಪ್ರಮಾಣದಲ್ಲಿ ದಾಸವಾಳದ ಚಹಾವನ್ನು ಕುಡಿದರೆ ಅದು ಕೆಲವು ಆರೋಗ್ಯ ಸಮಸ್ಯೆಯನ್ನು ಉಂಟು ಮಾಡುತ್ತದೆ. ಇನ್ನು ಸಿಂಪಲ್ಲಾಗಿ ಆರೋಗ್ಯಕರ ದಾಸವಾಳ ಟೀ ಮಾಡುವ ವಿಧಾನ ಹೀಗಿದೆ. . .

ಬೇಕಾಗುವ ಪದಾರ್ಥಗಳು:
ಒಣ ದಾಸವಾಳ ದಳ – 1 ಕಪ್
ನೀರು – 2 ಕಪ್, 1 ಲೀಟರ್
ಸಕ್ಕರೆ ಪುಡಿ – 1 ಕಪ್
ತಂಪಾದ ನೀರು – 1 ಲೀಟರ್
ಐಸ್ ಕ್ಯೂಬ್ಸ್ – ಅಗತ್ಯಕ್ಕೆ ತಕ್ಕಂತೆ

ಮಾಡುವ ವಿಧಾನ:
* ಮೊದಲಿಗೆ ಒಂದು ಪಾತ್ರೆಯಲ್ಲಿ 2 ಕಪ್ ನೀರು ಹಾಕಿ, ಅದರಲ್ಲಿ ಒಣಗಿದ ದಾಸವಾಳ ದಳಗಳನ್ನು ಸೇರಿಸಿ, ಬಿಸಿ ಮಾಡಿ.
* ಕುದಿ ಬಂದ ತಕ್ಷಣ ಉರಿಯನ್ನು ಕಡಿಮೆ ಮಾಡಿ, ಸುಮಾರು 15 ನಿಮಿಷಗಳ ಕಾಲ ಕುದಿಸಿಕೊಳ್ಳಿ.
* ಮತ್ತೊಂದು ಪಾತ್ರೆಯಲ್ಲಿ 1 ಲೀಟರ್ ತಂಪಾದ ನೀರಿಗೆ ಸಕ್ಕರೆ ಪುಡಿ ಹಾಕಿ ಅದು ಕರಗುವತನಕ ಮಿಶ್ರಣ ಮಾಡಿ.
* ದಾಸವಾಳ ಹಾಗೂ ನೀರಿನ ಮಿಶ್ರಣವನ್ನು ಶಾಖದಿಂದ ತೆಗೆದುಹಾಕಿ ಸುಮಾರು 30 ನಿಮಿಷ ತಣ್ಣಗಾಗಲು ಬಿಡಿ.
* 30 ನಿಮಿಷಗಳ ನಂತರ ದಾಸವಾಳದ ದಳಗಳನ್ನು ನೀರಿನಿಂದ ಪ್ರತ್ಯೇಕಿಸಿ.
* ಸಕ್ಕರೆ ಸೇರಿಸಿದ ನೀರಿಗೆ ದಾಸವಾಳದ ದ್ರವವನ್ನು ಸೇರಿಸಿ ಮಿಶ್ರಣ ಮಾಡಿ.
* ಕೊನೆಯಲ್ಲಿ ಐಸ್ ಕ್ಯೂಬ್ ಸೇರಿಸಿ ಗ್ಲಾಸ್‌ಗಳಲ್ಲಿ ಹಾಕಿ, ದಾಸವಾಳ ಟೀಯನ್ನು ಸೇವಿಸಿ

 ದಾಸವಾಳ ಟೀ ಕುಡಿದರೆ ಸಿಗುವ ಆರೋಗ್ಯಕರ ಪ್ರಯೋಜನಗಳು. . .
ನೀವು ಪ್ರತಿದಿನ ಕಾಫಿಯ ಬದಲು ದಾಸವಾಳದ ಚಹಾವನ್ನು ಕುಡಿಯುವುದರಿಂದ ನಿಮ್ಮ ದೇಹದಲ್ಲಿ ಕೆಲವು ಗಂಭೀರ ಬದಲಾವಣೆಗಳನ್ನು ಕಾಣಬಹುದಾಗಿದೆ. ಉದಾಹರಣೆಗೆ, ಕೆನೆ ಮತ್ತು ಸಕ್ಕರೆಯೊಂದಿಗೆ ಕಾಫಿ ಕುಡಿಯುವುದಕ್ಕಿಂತ ದಾಸವಾಳದ ಚಹಾವನ್ನು ಕುಡಿಯಿರಿ. ಇದು ತೂಕ ನಷ್ಟಕ್ಕೆ ಕಾರಣವಾಗಬಹುದು.

ದಾಸವಾಳದ ಚಹಾದಲ್ಲಿ ವಿಟಮಿನ್ ಸಿ ಇದೆ. ಇದು ಬಲವಾದ ಉತ್ಕರ್ಷಣ ನಿರೋಧಕವಾಗಿದೆ, ಮತ್ತು ನಮ್ಮ ರೋಗ ನಿರೋಧಕ ಶಕ್ತಿಯನ್ನು ಆರೋಗ್ಯವಾಗಿಡಲು ಇದು ಕಾರಣವಾಗಿದೆ.

ಪ್ರತಿದಿನ ದಾಸವಾಳದ ಚಹಾವನ್ನು ಕುಡಿಯುವುದರಿಂದ ನಿಮ್ಮ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಬಹುದು.

ಅಲ್ಲದೆ ನಿಮ್ಮ ದೇಹವು ದೀರ್ಘಕಾಲದ ಉರಿಯೂತದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದರಿಂದಾಗಿ ಹೆಚ್ಚಿನ ರೋಗಗಳನ್ನು ನಿರೋಧಿಸುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು