ಪೊಂಗಲ್ ಮಾಡಲು ಹೊರಡುವವರು ಒಮ್ಮೆಲೆ ಎರಡನ್ನು ತಯಾರು ಮಾಡಿ ಸ್ವಾದಿಸಬಹುದಾಗಿದೆ. ಇದನ್ನು ತಯಾರು ಮಾಡುವುದು ಕೂಡ ಸುಲಭವೇ… ಹಾಗಾದರೆ ಸಿಂಪಲ್ ಆಗಿ ಎರಡು ಪೊಂಗಲ್ ಒಮ್ಮೆಗೆ ಮಾಡುವುದು ಹೇಗೆ ಇಲ್ಲಿದೆ ನೋಡಿ ತಯಾರಿಸುವ ವಿಧಾನ..
ಬೇಕಾಗುವ ಪದಾರ್ಥಗಳು: ಸಿಹಿಪೊಂಗಲ್ ಗೆ ಹೆಸರು ಬೇಳೆ- ಒಂದು ಕಪ್, ಅಕ್ಕಿ- ಒಂದು ಕಪ್, ತುಪ್ಪ- ಎರಡು ಚಮಚ, ಅಲ್ಪ ಪ್ರಮಾಣದಲ್ಲಿ ಗೋಡಂಬಿ, ದ್ರಾಕ್ಷಿ, ಖಾರಾಪೊಂಗಲ್ ಗೆ ಹಸಿಶುಂಠಿ, ಕೊತ್ತಂಬರಿ, ಕರಿಬೇವು, ಅರಿಶಿನ, ಕೊಬ್ಬರಿ, ಉಪ್ಪು, ಜೀರಿಗೆ, ಹಸಿಮೆಣಸು.
ಮಾಡುವ ವಿಧಾನ: ಹೆಸರು ಬೇಳೆಯನ್ನು ಚೆನ್ನಾಗಿ ಹುರಿದು ಬಳಿಕ ಅಕ್ಕಿಯನ್ನು ಹಾಕಿ ಸ್ವಲ್ಪ ಬಾಡಿಸಿ ಬಳಿಕ ತುಪ್ಪದಲ್ಲಿ ಗೋಡಂಬಿ, ದ್ರಾಕ್ಷಿಯನ್ನು ಹುರಿದು ಹಾಕಿ ಕುಕ್ಕರ್ನಲ್ಲಿ ಸ್ವಲ್ಪ ನೀರು ಹಾಕಿ ರುಚಿಗೆ ತಕ್ಕಂತೆ ಸ್ವಲ್ಪ ಉಪ್ಪು ಹಾಕಿ ಒಂದು ವಿಶಲ್ ಕೂಗಿಸಿದರೆ ಪೊಂಗಲ್ ರೆಡಿಯಾಗಲಿದೆ. ಇಲ್ಲಿ ಹೆಸರುಬೇಳೆ ಮತ್ತು ಅಕ್ಕಿಯ ಜೊತೆಯಲ್ಲಿ ಬೆಲ್ಲದ ನೀರನ್ನು ಸೋಸಿ ಹಾಕಿ ಅದಕ್ಕೆ ಕೊಬ್ಬರಿ, ದ್ರಾಕ್ಷಿ, ಕೇಸರಿಯನ್ನು ತುಪ್ಪದಲ್ಲಿ ಹುರಿದು ಹಾಕಿ ಬೇಯಿಸಿದರೆ ಸಿಹಿಪೊಂಗಲ್ ತಯಾರಾಗಲಿದೆ.
ಇನ್ನು ಖಾರಾಪೊಂಗಲ್ ಗೆ ಹೆಸರುಬೇಳೆ ಮತ್ತು ಅಕ್ಕಿಯ ಜೊತೆಗೆ ಹಸಿಶುಂಠಿ, ಕೊತ್ತಂಬರಿ, ಕರಿಬೇವು, ಅರಿಶಿನ, ಕೊಬ್ಬರಿ, ಉಪ್ಪು, ಜೀರಿಗೆ, ಖಾರಾಪುಡಿ ಹಾಕಿ ಕುಕ್ಕರ್ನಲ್ಲಿ ಒಂದೆರಡು ವಿಶಲ್ ಕೂಗಿಸಿದರೆ ಖಾರಾಪೊಂಗಲ್ ಸವಿಯಲು ಸಿದ್ಧವಾಗಲಿದೆ.
ರಾಜ್ಯಸಭಾ ಸದಸ್ಯೆ ಸ್ವಾತಿ ಮಾಲಿವಾಲ್ ಮೇಲಿನ ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ…
ಇಲ್ಲಿನ ವೀರಾಪುರ ಓಣಿಯಲ್ಲಿ ಅಂಜಲಿ ಅಂಬಿಗೇರ ಹಂತಕ ಗಿರೀಶ ಉರುಫ್ ವಿಶ್ವ ಸಾವಂತ ವಿರುದ್ಧ ಬೆಂಡಿಗೇರಿ ಠಾಣೆಯಲ್ಲಿ ಮತ್ತೊಂದು ಪ್ರಕರನ…
ದೇಶದ್ಯಾಂತ ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ನಡೆಸಬೇಕೆಂಬ ಉದ್ದೇಶದಿಂದ ನಾನು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ, ರಾಹುಲ್ ಗಾಂಧಿ…
ಪೊಲೀಸ್ ಕಸ್ಟಡಿಯಲ್ಲಿಯೇ ಗಂಡ ಹಾಗೂ ಹೆಂಡತಿ ಮೃತಪಟ್ಟಿರುವ ಘಟನೆ ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ನಡೆದಿದೆ.
ಇದು ತೆಲುಗು ಕಿರುತೆರೆ ನಟ ಚಂದು ಆತ್ಮಹತ್ಯೆಗೂ ಮುನ್ನ ಬರೆದ ಸಂದೇಶ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚಂದುವಿನ ಕೊನೆಯ ಮೆಸೇಜ್…
ಕರ್ನಾಟಕದ ಹಲವೆಡೆ ಮೇ 19ರಿಂದ 21 ರವರೆಗೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.