ಕ್ಯಾರೆಟ್ ಹಲ್ವ ಮಾಡುವ ಸುಲಭ ವಿಧಾನ

ಹೊಸ ಹೊಸ ಬಗೆಯ ತಿಂಡಿಗಳನ್ನು ಕಲಿತು ಬಾಯಿ ರುಚಿಸುವಂತಹ ತಿನಸುಗಳನ್ನು ತಯಾರಿಸಬೇಕು. ಇವತ್ತು ನಾವು ಬಾಯಿ ಸಿಹಿ ಮಾಡಲು ಕ್ಯಾರೆಟ್ ಹಲ್ವ ತಯಾರಿಸಿ ಸವಿಯೋಣ.

ಬೇಕಾಗುವ ಸಾಮಾಗ್ರಿಗಳು:

ಕ್ಯಾರೆಟ್ – ಒಂದು ಕೇಜಿ, ಸಿಪ್ಪೆ ಸುಲಿದು ಚಿಕ್ಕದಾಗಿ ತುರಿದದ್ದು. ಹಾಲು – ಎರಡು ಲೀಟರ್, ಖೋವಾ – ಅರ್ಧ ಕೇಜಿ (ಇದಕ್ಕೆ ಮಾವಾ ಎಂದು ಕರೆಯುತ್ತಾರೆ), ಸಕ್ಕರೆ – ಒಂದು ಕಪ್, ತುಪ್ಪ – ಎರಡು ದೊಡ್ಡ ಚಮಚ, ಸಿಂಗರಿಸಲು ಗೋಡಂಬಿ – ಐದರಿಂದ ಆರು, ಬಾದಾಮಿ : ಐದರಿಂದ ಆರು, ಏಲಕ್ಕಿ ಪುಡಿ: ಒಂದು ಚಿಟಿಕೆ

ತಯಾರಿಕಾ ವಿಧಾನ:
1) ಹಾಲನ್ನು ದಪ್ಪ ತಳದ ಪಾತ್ರೆಯಲ್ಲಿ ಹಾಕಿ ಕುದಿ ಬರಿಸಿ. ನಡುನಡುವೆ ನಿಧಾನವಾಗಿ ತಿರುವುತ್ತಿರಿ.
2) ಕುದಿ ಬಂದ ಬಳಿಕ ಉರಿಯನ್ನು ಅತಿ ಚಿಕ್ಕದಾಗಿಸಿ ಪಾತ್ರೆ ತೆರೆದ ಸ್ಥಿತಿಯಲ್ಲಿ ಸುಮಾರು ಮುಕ್ಕಾಲು ಗಂಟೆಯಿಂದ ಐವತ್ತು ನಿಮಿಷದವರೆಗೆ ಕುದಿಯಲು ಬಿಡಿ. ಬಳಿಕ ಹಾಲು ದಟ್ಟವಾಗುತ್ತದೆ. ಪಾತ್ರೆಯ ತಳ ಹತ್ತದಂತೆ ನಡುನಡುವೆ ತಿರುವುತ್ತಿರಿ.
3) ಬಳಿಕ ತುರಿದ ಕ್ಯಾರೆಟ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಎಲ್ಲಾ ಹಾಲನ್ನು ಕ್ಯಾರೆಟ್ ಹೀರಿಕೊಳ್ಳುವವರೆಗೆ ನಡುನಡುವುತ್ತಾ ತಿರುವುತ್ತಿರಿ.
4) ಕ್ಯಾರೆಟ್ ನಲ್ಲಿನ ನೀರಿನ ಅಂಶಕ್ಕೆ ಅನುಗುಣವಾಗಿ ಹೀರಿಕೊಳ್ಳುವ ಸಮಯ ಕೊಂಚ ಹೆಚ್ಚುಕಡಿಮೆಯಾಗಬಹುದು. ಆದರೂ ಸುಮಾರು ಮುಕ್ಕಾಲು ಗಂಟೆ ತೆಗೆದುಕೊಳ್ಳುತ್ತದೆ.
5) ಹಾಲೆಲ್ಲಾ ಹೀರಿಕೊಂಡಿದೆ ಎಂದು ಮನವರಿಕೆಯಾದ ಬಳಿಕ ಉರಿ ನಂದಿಸಿ ಪಾತ್ರೆಯನ್ನು ಬದಿಗಿಡಿ.
6) ಇನ್ನೊಂದು ದಪ್ಪತಳದ ಚಿಕ್ಕ ಪಾತ್ರೆಯಲ್ಲಿ ತುಪ್ಪ ಬಿಸಿಮಾಡಿ. ತುಪ್ಪ ಬಿಸಿಯಾಗುತ್ತಿದ್ದಂತೆಯೇ ಏಲಕ್ಕಿ ಪುಡಿ ಹಾಕಿ ತಕ್ಷಣವೇ ಬೆಂದ ಕ್ಯಾರೆಟ್ ತುರಿಯನ್ನು ಹಾಕಿ ತಿರುವಿ.
7) ಬಳಿಕ ಖೋವಾ ಮತ್ತು ಸಕ್ಕರೆಯನ್ನು ನಿಧಾನವಾಗಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಉರಿ ಚಿಕ್ಕದಾಗಿರಲಿ
8) ಸಕ್ಕರೆ ಪೂರ್ಣವಾಗಿ ಕರಗಿದೆ ಅನ್ನಿಸಿದ ಬಳಿಕ ಉರಿ ನಂದಿಸಿ ತಣಿಯಲು ಬಿಡಿ. ಬಳಿಕ ಮೇಲ್ಭಾಗದಲ್ಲಿ ಗೋಡಂಬಿ ಮತ್ತು ಬಾದಾಮಿಗಳನ್ನು ಹರಡಿ ಅಲಂಕರಿಸಿ.

Desk

Recent Posts

ವಿಜೃಂಭಣೆಯಿಂದ ಜರುಗಿದ ಶ್ರೀ ಅವಿಜ್ಞ ಸಾಯಿಬಾಬಾ ಪ್ರತಿಷ್ಠಾಪನಾ ಮಹೋತ್ಸವ

ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಬಿಳಿಗೆರೆ ಹೋಬಳಿಯ ಸರಗೂರು ಗ್ರಾಮದಲ್ಲಿ ಶ್ರೀ ಅವಿಜ್ಞ ಸಾಯಿ ಕ್ಷೇತ್ರದಲ್ಲಿ ಶ್ರೀ ಅವಿಜ್ಞ…

1 hour ago

ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿ: 40 ಜನರ ರಕ್ಷಣೆ

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿ ಗ್ರಾಮದ ಮೂಡಂಗಿಯ ಸಮೀಪ  ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿಯಾದ ಘಟನೆ ನಡೆದಿದೆ. 

1 hour ago

ಮೋದಿಗೆ ಯಾರೂ ಮತ ಹಾಕಬೇಡಿ ಎಂದಿದ್ದ ಶಿಕ್ಷಕ ಅರೆಸ್ಟ್

ಬಿಹಾರದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಮೋದಿಗೆ ಯಾರೂ ಮತ ಹಾಕಬೇಡಿ ಎಂದು ಮಕ್ಕಳಿಗೆ ಹೇಳಿದ್ದಕ್ಕೆ ಶಿಕ್ಷಕನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

2 hours ago

ಮೇ 24ರಿಂದ ಮೈಸೂರಿನಲ್ಲಿ ಮಾವು, ಹಲಸು ಮೇಳ

ಪ್ರತಿವರ್ಷದಂತೆ ಈ ಬಾರಿಯೂ ಮೈಸೂರು ನಗರದಲ್ಲಿ  ಒಂದೇ ಸೂರಿನಡಿ ವಿವಿಧ ಮಾವಿನ ತಳಿಯ ಹಣ್ಣು, ಹಲಸಿನ ಹಣ್ಣಿನ ರುಚಿ ಸವಿಯಲು…

2 hours ago

ಜಿಪ್​ ಲೈನ್ ತುಂಡಾಗಿ ಬಿದ್ದು ಮಹಿಳೆ ಸಾವು

ಜಿಪ್​ ಲೈನ್ ತುಂಡಾಗಿ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ  ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಜಂಗಲ್ ಟ್ರಯಲ್ಸ್ ರೆಸಾರ್ಟ್​ನಲ್ಲಿ ನಡೆದಿದೆ. 

3 hours ago

ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಕೆರೆಯಲ್ಲಿ ಮುಳುಗಿ ಮೃತ್ಯು

ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಸದ್ಯಸರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಎಂಬಲ್ಲಿ…

3 hours ago