News Karnataka Kannada
Monday, April 29 2024
ಅಡುಗೆ ಮನೆ

ಗರಿ ಗರಿಯಾದ ನಿಪ್ಪಟ್ಟು ಮಾಡುವ ಸರಳ ವಿಧಾನ ಇಲ್ಲಿದೆ

ನಿಪ್ಪಟ್ಟು ಯಾರಿಗೆ ಇಷ್ಟ ಇಲ್ಲ ಹೇಳಿ. ಸಂಜೆ ಹೊತ್ತು ಚಹಾದ ಜೊತೆ ತಿಂದರೆ ಅದರಷ್ಟು ರುಚಿಕರ ಯಾವುದು ಇಲ್ಲ ಸರಳವಾಗಿ ಮನೆಯಲ್ಲಿ ಕೇವಲ 10 ನಿಮಿಷಗಳಲ್ಲಿ ನಿಪ್ಪಟ್ಟು ತಯಾರಿಸಬಹುದು. 
Photo Credit : News Kannada

ನಿಪ್ಪಟ್ಟು ಯಾರಿಗೆ ಇಷ್ಟ ಇಲ್ಲ ಹೇಳಿ. ಸಂಜೆ ಹೊತ್ತು ಚಹಾದ ಜೊತೆ ತಿಂದರೆ ಅದರಷ್ಟು ರುಚಿಕರ ಯಾವುದು ಇಲ್ಲ ಸರಳವಾಗಿ ಮನೆಯಲ್ಲಿ ಕೇವಲ 10 ನಿಮಿಷಗಳಲ್ಲಿ ನಿಪ್ಪಟ್ಟು ತಯಾರಿಸಬಹುದು.

ಬೇಕಾಗುವ ಸಾಮಗ್ರಿಗಳು:
* ಕಡಲೆಕಾಯಿ- 1ಕಪ್
* ಎಳ್ಳು- ಅರ್ಧ ಕಪ್
* ಜೀರಿಗೆ- ಅರ್ಧ ಸ್ಪೂನ್
* ರುಚಿಗೆ ತಕ್ಕಷ್ಟು ಉಪ್ಪು
* ಖಾರದ ಪುಡಿ- 2 ಟೀ ಸ್ಪೂನ್
* ಕಡಲೆ ಹಿಟ್ಟು- ಅರ್ಧ ಕಪ್
* ಕರಿಬೇವು- ಸ್ವಲ್ಪ
* ಅಕ್ಕಿ ಹಿಟ್ಟು- ಅರ್ಧ ಕಪ್
* ಅಡುಗೆ ಎಣ್ಣೆ

ಮಾಡುವ ವಿಧಾನ: ಮೊದಲು ಒಂದು ಮಿಕ್ಸಿ ಜಾರಿಗೆ ಕಡಲೆಕಾಯಿ ಹಾಕಿ ಪುಡಿ ಮಾಡಿಕೊಳ್ಳಿ. ಒಂದು ಬೌಲ್‍ಗೆ ಪುಡಿ ಮಾಡಿದ ಕಡಲೆಕಾಯಿ ಪುಡಿ, ಜೀರಿಗೆ, ಎಳ್ಳು, ಕಡಲೆ ಹಿಟ್ಟು, ಖಾರದ ಪುಡಿ, ಅಕ್ಕಿ ಹಿಟ್ಟು, ಉಪ್ಪು, ಕರಿಬೇವು, ಬಿಸಿ ಮಾಡಿದ ಅಡುಗೆ ಎಣ್ಣೆ ಹಾಕಿ ಚೆನ್ನಾಗಿ ಕಲಸಿಕೊಳ್ಳಿ.  ಬಳಿಕ ಇದನ್ನು ಸಣ್ಣ ಉಂಡೆ ಮಾಡಿಕೊಂಡು ಸಣ್ಣದಾಗಿ ತಟ್ಟಿಕೊಳ್ಳಬೇಕು.

ನಂತರ ಎಣ್ಣೆ ಬಿಸಿಯಾದ ಬಳಿಕ ತಟ್ಟಿದ ನಿಪ್ಪಟ್ಟನ್ನು ಕರಿದರೆ, ರುಚಿಕರವಾದ ಖಾರ ನಿಪ್ಪಟ್ಟು ಸವಿಯಲು ಸಿದ್ಧ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು