ಹಬ್ಬಗಳ ಸೀಸನ್ ಹತ್ತಿರ ಬರುತ್ತಿದೆ, ನವರಾತ್ರಿಯಲ್ಲಿ ದೇವರ ನೈವೇದ್ಯಕ್ಕೆ ಹಾಗೂ ಮಕ್ಕಳ ಆರೋಗ್ಯಾಕ್ಕೂ ಹಿತವಾದ ಅಕ್ಕಿ ಪಾಯಸ ಈ ರೀತಿ ಮಾಡಿ ಸವಿಯಿರಿ
ಬೇಕಾಗುವ ಪದಾರ್ಥಗಳು
ಅಕ್ಕಿ – 1 ಬಟ್ಟಲು
ತೆಂಗಿನ ಹಾಲು – 1 ಬಟ್ಟಲು
ತೆಳುವಾದ ತೆಂಗಿನ ಹಾಲು – 2 ಬಟ್ಟಲು
ಗೋಡಂಬಿ, ದ್ರಾಕ್ಷಿ – ಸ್ವಲ್ಪ
ಎಲಕ್ಕಿ ಪುಡಿ- ಸ್ವಲ್ಪ
ಬೆಲ್ಲ- 1 ಬಟ್ಟಲು
ತುಪ್ಪ- ಸ್ವಲ್ಪ
ಕೇಸರಿ ದಳ- ಸ್ವಲ್ಪ
ಮಾಡುವ ವಿಧಾನ…
ತೆಳುವಾದ ತೆಂಗಿನ ಹಾಲಿನಲ್ಲಿ ಅಕ್ಕಿಯನ್ನು ಚೆನ್ನಾಗಿ ಬೇಯಿಸಿಕೊಳ್ಳಿ.
ಬೆಂದ ಅನ್ನಕ್ಕೆ ಬೆಲ್ಲವನ್ನು ಸೇರಿ, ಗಟ್ಟಿಯಾದ ತೆಂಗಿನ ಹಾಲು ಸೇರಿಸಿ 5 ನಿಮಿಷ ಕುದಿಯಲು ಬಿಡಿ.
ನಂತರ ಪ್ಯಾನ್ ಒಂದರಲ್ಲಿ ಸ್ವಲ್ಪ ತುಪ್ಪವನ್ನು ಹಾಕಿ ದ್ರಾಕ್ಷಿ ಹಾಗೂ ಗೋಡಂಬಿಯನ್ನು ಕೆಂಪಗೆ ಹುರಿದುಕೊಳ್ಳಿ.
ನಂತರ ಪ್ಯಾನ್ ಒಂದರಲ್ಲಿ ಸ್ವಲ್ಪ ತುಪ್ಪವನ್ನು ಹಾಕಿ ದ್ರಾಕ್ಷಿ ಹಾಗೂ ಗೋಡಂಬಿಯನ್ನು ಕೆಂಪಗೆ ಹುರಿದುಕೊಳ್ಳಿ.
ನಂತರ ಕುಡಿಯುತ್ತಿರುವ ಅನ್ನಕ್ಕೆ ದ್ರಾಕ್ಷಿ, ಗೋಡಂಬಿ ಹಾಗೂ ಏಲಕ್ಕಿ ಪುಡಿ, ಕೇಸರಿ ದಳವನ್ನು ಹಾಕಿದರೆ ರುಚಿಕರವಾದ ಅಕ್ಕಿ ಪಾಯಸ ಸವಿಯಲು ಸಿದ್ಧ.