News Karnataka Kannada
Friday, May 03 2024
ಅಡುಗೆ ಮನೆ

ಸಿಹಿ ಕುಂಬಳಕಾಯಿ ಹಲ್ವಾ

Photo Credit :

ಸಿಹಿ ಕುಂಬಳಕಾಯಿ ಹಲ್ವಾ

ಸಿಹಿ ಕುಂಬಳಕಾಯಿ ಅಂದರೆ ಹೆಚ್ಚಿನವರಿಗೆ ಅಲರ್ಜಿ. ಆದರೆ ಅದರಿಂದ ಹಲ್ವಾ ತಯಾರಿಸಿದರೆ ಎಷ್ಟು ರುಚಿಯಾಗಿರುತ್ತೆ ಎಂದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಬನ್ನಿ ನಾವು ಸಿಹಿ ಕುಂಬಳಕಾಯಿಯ ಹಲ್ವಾ ತಯಾರಿಸಿ ಸವಿಯೋಣ.

ಬೇಕಾಗುವ ಸಾಮಾಗ್ರಿಗಳು :
ತುರಿದ ಸಿಹಿಗುಂಬಳಕಾಯಿ 2 ಕಪ್
ಹಾಲು 1 ಕಪ್
ಸಕ್ಕರೆ 1 ಕಪ್
ತುಪ್ಪ 1/2 ಕಪ್
ಒಣದ್ರಾಕ್ಷಿ
ಏಲಕ್ಕಿ ಪುಡಿ
ಗೋಡಂಬಿ

ತಯಾರಿಸುವ ವಿಧಾನ :
ಸಿಹಿಗುಂಬಳಕಾಯಿ ತುರಿಯನ್ನು ಕುಕ್ಕರ್‌ನಲ್ಲಿ ಸ್ವಲ್ಪ ನೀರಿನೊಡನೆ ಎರಡು ವಿಸಿಲ್‌ ಬರುವವರೆಗೆ ಕುದಿಸಿ. ಬಳಿಕ ತಣಿಸಿ ಮುಚ್ಚಳ ತೆಗೆದು ಒಂದು ತಟ್ಟೆಯಲ್ಲಿ ಇಡಿ.  ಒಂದು ದಪ್ಪ ತಳದ ಬಾಣಲೆಯನ್ನು ಸ್ಟೌ ಮೇಲೆ ಇರಿಸಿ ತುಪ್ಪವನ್ನು ಕಾಯಿಸಿ. ತುಪ್ಪ ಬಿಸಿಯಾದ ಕೂಡಲೇ ಬೇಯಿಸಿದ ಸಿಹಿಗುಂಬಳಕಾಯಿ ತುರಿಯನ್ನು ಹಾಕಿ.ಕುಂಬಳಕಾಯಿ ಪೂರ್ಣವಾಗಿ ಬೇಯುವವರೆಗೆ ತಿರುವುತ್ತಾ ಇರಿ. ಸರಿಯಾಗಿ ಬೆಂದ ನಂತರ ಅದಕ್ಕೆ ಹಾಲು ಹಾಕಿ ಕಲಕಿ. ಬಳಿಕ ಸಕ್ಕರೆ ಹಾಕಿ. ಹಾಲನ್ನು ಕುಂಬಳಕಾಯಿ ತುರಿ ಪೂರ್ಣವಾಗಿ ಹೀರಿಕೊಂಡ ಬಳಿಕ ಸ್ವಲ್ಪ ತುಪ್ಪ ಹಾಕಿ ತಿರುವಿ. ಈಗ ಏಲಕ್ಕಿಪುಡಿ ಹಾಕಿ ಪಾತ್ರೆಯನ್ನು ಕೆಳಗಿಳಿಸಿ. ಇನ್ನೊಂದು ಪಾತ್ರೆಯಲ್ಲಿ ತುಪ್ಪದ ಜೊತೆ ಗೋಡಂಬಿ ಮತ್ತು ದ್ರಾಕ್ಷಿಯನ್ನು ಹುರಿದು ಹಲ್ವಾದ ಜೊತೆ ಸೇರಿಸಿ.  ಈಗ ರುಚಿಯಾದ ಘಂ ಎನ್ನುವ ಸಿಹಿ ಕುಂಬಳ ಕಾಯಿ ಹಲ್ವಾ ಸವಿಯಲು ರೆಡಿಯಾಗುತ್ತದೆ. 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು