News Karnataka Kannada
Wednesday, May 08 2024
ಅಡುಗೆ ಮನೆ

ಮಸಾಲ ದೋಸೆ ಮಾಡುವ ಸರಳ ವಿಧಾನ ಇಲ್ಲಿದೆ

Masala Dosa
Photo Credit : IANS

ಮಸಾಲ ದೋಸೆ ಮಾಡಲು ಬೇಕಾಗುವ ಸಾಮಗ್ರಿಗಳು

ಮೂರು ಲೋಟದಷ್ಟು ವೈಟ್ ರೈಸ್, ಅರ್ದ ಲೋಟದಷ್ಟು ಉರ್ದು ಬೇಳೆ, ಅರ್ದ ಲೋಟದಷ್ಟು ಕಡಲೆ ಬೇಳೆ, ಎರಡು ಚಿಕ್ಕ ಚಮಚ ದಷ್ಟು ಮೆಂತೆ, ತುಪ್ಪ, ಉಪ್ಪು, ಬಟಾಟೆ ಬಾಜಿ.

ಮಸಾಲ ದೋಸೆ ರೆಸಿಪಿ ಮಾಡುವ ವಿಧಾನ

ವೈಟ್ ರೈಸ್ ಅನ್ನು ಕಡಿಮೆ ಅಂದ್ರೆ ಎರಡು ತಾಸು ನೀರಿನಲ್ಲಿ ನಿನೆಯಿಸಿ, ಹಾಗೆಯೆ ಉರ್ದು ಬೇಳೆಯನ್ನು ಕೂಡ ಎರಡು ತಾಸು ನೀರಲ್ಲಿ ನೆನೆಸಿ, ಹಾಗೆಯೇ ಕಡಲೆ ಬೇಳೆ ಯನ್ನೂ ಕೂಡ ಬೇರೆಯೇ ಎರಡು ತಾಸು ನೀರಲ್ಲಿ ನೆನೆಸಿ, ಹಾಗೆಯೇ ಮೆಂತೆಯನ್ನು ಕೂಡ ಎರಡು ತಾಸು ನೀರಲ್ಲಿ ನೆನೆಸಿ.

ಸುಮಾರು ಎರಡು ತಾಸು ಕಳೆದ ನಂತರ ಮಿಕ್ಸ್ ಜಾರ್ ತಗೊಂಡು ನೆನೆಸಿ ಇಟ್ಟಂತಹ ಕಡಲೆ ಬೇಳೆಯನ್ನು, ಮೆಂತೆಯನ್ನು, ಉರ್ದು ಬೇಳೆಯನ್ನು ಹಾಕಿ ಈಗ ಮಿಕ್ಸ್ ಚಾಲೂ ಮಾಡುವ ಮೊದಲು ಸ್ವಲ್ಪ ಬೇಕಾ ಬೇಡವಾ ಎನ್ನುವಷ್ಟು ನೀರು ಹಾಕಿ, ಮಿಕ್ಸ್ ಚಾಲೂ ಮಾಡಿ ಸನ್ನವಾಗಿ ಕಡೆಯಿರಿ.

ಸಣ್ಣವಗಿ ಕಡೆದಿರುವಂತದನ್ನು (ಮಿಕ್ಸಿಯಲ್ಲಿ) ಬೇರೆ ಒಂದು ಪಾತ್ರೆಗೆ ಹಾಕಿ, ಈಗಾ ಅದೇ ಮಿಕ್ಸ್ ಜಾರ್ ಗೆ ನೆನೆಸಿ ಆರಿಸಿ ಇತ್ತಂತಹ ದೋಸೆಯ ಅಕ್ಕಿಯನ್ನು ಆರಿಸಿ ಹಾಕಿ, ಬೇಕಾ ಬೇಡವಾ ಎನ್ನುವಷ್ಟು ನೀರು ಹಾಕಿ ಮಿಕ್ಸಿಯಲ್ಲಿ ಕಡೆಯಿರಿ, ತುಂಬಾ ಸನ್ನಾವಾಗಿ ಕಡೆಯವುದು ಬೇಡ. ರವೆಯ ತರಹ ಆದರೆ ಸಾಕು. ಈಗಾ ಮಿಕ್ಸಿಯಲ್ಲಿ ಕಡೆದಿರುವ ಹಿಟ್ಟನ್ನು ಆಗ ಹಾಕಿದ ಪಾತ್ರೆಗೆ ಸೇರಿಸಿ, ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮತ್ತೆ ಚೆನ್ನಾಗಿ ಮಿಕ್ಸ್ ಮಾಡಿ, ಮಸಾಲೆ ದೋಸೆಯ ಹಿಟ್ಟು ತುಂಬಾ ದಪ್ಪ ಹಾಗೂ ತುಂಬಾ ತೆಳುವಾಗಿ ಇರಬಾರದು. ಇದನ್ನೂ ಒಂದು ರಾತ್ರಿ ಹಾಗೇ ಉಬ್ಬಲೂ ಬಿಡಿ .(ಫರ್ಮಂಟೇಷನ್) ಇನ್ನೊಂದು ಬೆಳಗ್ಗೆ ಎದ್ದು ನೋಡಿದರೆ ಹಿಟ್ಟು ಉಬ್ಬಿರುತ್ತದೆ.

ಈಗಾ ಒಂದು ನಾನ್ ಸ್ಟಿಕ್ ತವಾ ಅತ್ವ ಕಾವಲಿಯನ್ನು ತೆಗೆದುಕೊಳ್ಳಿ ಅದಕ್ಕೆ ಸ್ವಲ್ಪ ನೀರು ಹಾಕಿ ಒಳ್ಳೆಯ ಶುಚಿಯಾದ ಬಟ್ಟೆಯಿಂದ ಒರೆಸಿ, ಸ್ಟವ್ ನ ಒನ್ ಮಾಡದೆ ಹಿಟ್ಟನ್ನು ಕಾವಲಿಯ ಮದ್ಯದಲ್ಲಿ ಹಾಕಿ ಚೆನ್ನಾಗಿ ರೌಂಡ್ ಮಾಡಿ, ಮಸಾಲ ದೋಸೆ ದೊಡ್ಡದಾಗಿರುತ್ತದೆ, ಹಾಗೇ ಬಿಡಿಸಿ. ನಂತರ ತುಪ್ಪವನ್ನು ಮಸಾಲ ದೋಸೆ ಮಧ್ಯದಲ್ಲಿ ಸವರಿ, ಮಸಾಲ ದೋಸೆ ಕಾಯುತ್ತಾ ಬರುವಾಗ ಬಟಾಟೆ ಬಾಜಿಯನ್ನು ದೋಸೆಯ ಮದ್ಯದಲ್ಲಿ ಹಾಕಿ ಚೆನ್ನಾಗಿ ರೋಲ್ ಮಾಡಿ, ಹಾಗೆಯೆ ಮೂರರಿಂದ ನಾಲ್ಕು ಮಸಾಲ ದೋಸೆ ರೆಡಿ ಮಾಡಿ.

ಇದನ್ನೂ ಬೆಳಗ್ಗಿನ ಉಪಹಾರಕ್ಕೆ ಸೇವಿಸಿದರೆ ಉತ್ತಮವಾಗಿರುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು