ನಮ್ಮ ದೇಶದಲ್ಲಿ ಬಹುತೇಕ ಜನರಿಗೆ ಬೆಳಗ್ಗೆ ಎದ್ದು ಹಲ್ಲುಜ್ಜಿದ ತಕ್ಷಣವೇ ಒಂದು ಕಪ್ ಬಿಸಿ ಬಿಸಿ ಚಹಾ ಕುಡಿಯುತ್ತಾರೆ. ಈ ಚಹಾವನ್ನು ಇನ್ನಷ್ಟು ರುಚಿಕರ ಮತ್ತು ಆರೋಗ್ಯಕರ ಮಾಡಿಕೊಳ್ಳಲು ಮಸಾಲೆ ಚಹಾ ಮಾಡಿಕೊಳ್ಳುವುದು ಉತ್ತಮ ಆಯ್ಕೆ. ಚಹಾ ಮಸಾಲೆಯನ್ನು ಮನೆಯಲ್ಲಿಯೇ ಹೇಗೆ ತಯಾರು ಮಾಡಿಕೊಳ್ಳಬಹುದು ಎಂದು ತಿಳಿಸಿ ಕೊಡುತ್ತೇವೆ. ಇದರಿಂದ ನೀವು ಕೆಲವೇ ನಿಮಿಷಗಳಲ್ಲಿ ಮಸಾಲೆ ಚಹಾವನ್ನು ತಯಾರಿಸಿಕೊಂಡು ಆನಂದಿಸಬಹುದು.
ಚಹಾ ಮಸಾಲೆ ಮಿಶ್ರ ಣ ತಯಾರಿಸಲು ನಿಮಗೆ ಬೇಕಾಗಿರುವುದು ಕೆಲವೇ ಕೆಲವು ಮಸಾಲೆ ಪದಾರ್ಥಗಳಾಗಿದ್ದು, ಅದನ್ನು ನೀವು ನಿಮ್ಮ ಅಡುಗೆ ಮನೆಯಲ್ಲಿಯೇ ಸುಲಭವಾಗಿ ಪಡೆಯಬಹುದು. ಚಹಾ ಮಸಾಲೆ ಮಿಶ್ರಣ ಮಾಡಿಕೊಳ್ಳಲು ನೀವು ಮೊದಲಿಗೆ ಮಸಾಲೆ ಪದಾರ್ಥಗಳಾದ ದಾಲ್ಚಿನ್ನಿ, ಲವಂಗ ಮತ್ತು ಏಲಕ್ಕಿ ಸೇರಿಸಿಕೊಂಡು ಮಿಕ್ಸರ್ನಲ್ಲಿ ಹಾಕಿ ಚೆನ್ನಾಗಿ ಪುಡಿ ಮಾಡಿಕೊಳ್ಳಿ. ಇವುಗಳನ್ನು ಪುಡಿ ಮಾಡಿದ ನಂತರ, ಅದನ್ನು ತಿಂಗಳುಗಳ ಕಾಲ ಜಾಡಿಯಲ್ಲಿ ಸಂಗ್ರಹಿಸಿಡಿ.
ಚಹಾಕ್ಕೆ ಅರ್ಧ ಟೇಬಲ್ ಚಮಚ ಈ ಮಸಾಲೆ ಸೇರಿಸಬಹುದು ಮತ್ತು ಮಸಾಲೆಗಳ ರುಚಿ ನಿಮ್ಮ ಚಹಾದಲ್ಲಿ ಸರಿಯಾಗಿ ಬೆರೆಯಲು ಅದನ್ನು ಕುದಿಯಲು ಬಿಡಬೇಕು. ಈ ಚಹಾ ಮಸಾಲೆಯೊಂದಿಗೆ ನಿಮ್ಮ ಚಹಾಕ್ಕೆ ಒಂದು ಬೇರೆಯೇ ರುಚಿ ಮತ್ತು ಪರಿಮಳ ದೊರೆಯುತ್ತದೆ. ಈ ಮಸಾಲೆ ಮಿಶ್ರಣ ಸೇರಿಸಿಕೊಂಡು ಮಸಾಲೆ ಚಹಾ ಮಾಡಿಕೊಂಡು ನೀವು ಈ ಬಿಸಿ ಬಿಸಿ ಮಸಾಲೆ ಚಹಾದೊಂದಿಗೆ ರುಚಿಕರವಾದ ತಿಂಡಿಗಳೊಂದಿಗೆ ಕುಡಿಯಿರಿ.