News Karnataka Kannada
Monday, May 06 2024
ಅಡುಗೆ ಮನೆ

ಮಂಗಳೂರಿನ ರೆಸಿಪಿ ಎಗ್ ಗೀ ರೋಸ್ಟ್

Egg Gee Roast
Photo Credit :

ರಾತ್ರಿ ಊಟದಲ್ಲಿ ಪ್ರೋಟೀನ್ ಭರಿತ ಆಹಾರ ಸೇವಿಸಲು ಬಯಸಿದ್ದರೆ ಮಂಗಳೂರಿನ ರೆಸಿಪಿ ಎಗ್ ಗೀ ರೋಸ್ಟ್ ತಯಾರಿಸಿ.

ಬೇಕಾಗುವ ಸಾಮಾಗ್ರಿಗಳು : 3 ಬೇಯಿಸಿದ ಮೊಟ್ಟೆಗಳು, 3 ಟೊಮೆಟೊ, 2 ಈರುಳ್ಳಿ, 6 ಒಣ ಕೆಂಪು ಮೆಣಸಿನಕಾಯಿ, 1 ಚಮಚ ಕಾಳು ಮೆಣಸು, 2 ಲವಂಗ, 1 ಚಮಚ ದನಿಯಾ, 1 ಚಮಚ ಜೀರಿಗೆ, 4 ಬೆಳ್ಳುಳ್ಳಿ ಎಸಳು, 1 ಪುಲಾವ್ ಎಲೆ, 1 ಚಮಚ ಶುಂಠಿ, ½ ಚಮಚ ಅರಿಶಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ : ಮೊದಲು ಕೆಂಪು ಮೆಣಸಿನ ಕಾಯಿ, ಕಾಳು ಮೆಣಸು, ಲವಂಗ, ದನಿಯಾ, ಬೆಳ್ಳುಳ್ಳಿ, ಶುಂಠಿ, ಜೀರಿಗೆ, ಮತ್ತು ಪುಲಾವ್ ಎಲೆಗಳನ್ನು ಬಾಣಲೆಯಲ್ಲಿ ಹಾಕಿ ಪರಿಮಳ ಬರುವವರೆಗೂ ಹುರಿಯಿರಿ. ನಂತರ ರುಬ್ಬಿಕೊಳ್ಳಿ. ಬಳಿಕ ಅದೇ ಬಾಣಲೆಗೆ ತುಪ್ಪ, ಕರಿಬೇವು, ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಅದಕ್ಕೆ ಅರಿಶಿನ ಪುಡಿ, ಟೊಮೆಟೊ, ರುಬ್ಬಿದ

ಮಸಾಲೆ, ಉಪ್ಪು ಸೇರಿಸಿ ಬೇಯಿಸಿ. ಅದು ಬೆಂದ ಬಳಿಕ ಅರ್ಧ ಕಟ್ ಮಾಡಿದ ಮೊಟ್ಟೆಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ ಎಗ್ ಗೀ ರೋಸ್ಟ್ ರೆಡಿ. ಇದನ್ನು ಅನ್ನ, ಪರಾಠ ಜೊತೆ ಸವಿಯಬಹುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು