News Karnataka Kannada
Tuesday, May 07 2024
ಅಡುಗೆ ಮನೆ

ಬೀಟ್ ರೂಟ್ ಹಲ್ವಾ

Photo Credit :

ಬೀಟ್ ರೂಟ್ ಹಲ್ವಾ

ದೇಹಕ್ಕೆ ಎಲ್ಲಾ ರೀತಿಯ ಪೋಷಕಾಂಸಗಳು ದೊರೆಯಲು ಎಲ್ಲಾ ರೀತಿಯ ತರಕಾರಿಗಳನನ್ಉ ತಿನ್ನಬೇಕು. ಏಕೆಂದರೆ ಎಲ್ಲಾ ಬಗೆಯ ಪೋಷಕಾಂಶಗಳು ಮತ್ತು ವಿಟಮಿನ್ ಗಳು ಒಂದೇ ಬಗೆಯ ಆಹಾರದಲ್ಲಿ ಇರುವುದಿಲ್ಲ. ಅದರಲ್ಲೂ ಕೆಲವು ತರಕಾರಿಗಳು ಔಷಧೀಯ ಗುಣವನ್ನು ಹೊಂದಿದೆ. ಅದರಲ್ಲಿ ಬೀಟ್ ರೂಟ್ ಆರೋಗ್ಯಕ್ಕೆ ಉತ್ತಮವಾದ ಆಹಾರ. ಬನ್ನಿ ನಾವು ಇವತ್ತು ಬೀಟ್ ರೂಟ್ ಹಲ್ವಾ ತಯಾರಿಸಿ ಸವಿಯೋಣ.
ಬೇಕಾಗುವ ಪದಾರ್ಥಗಳು
ಬೀಟ್ ರೂಟ್ – 4
ಹಾಲು – 2 ಬಟ್ಟಲು
ಸಕ್ಕರೆ – ಅರ್ಧ ಬಟ್ಟಲು
ಏಲಕ್ಕಿ ಪುಡಿ – 1 ಚಮಚ
ತುಪ್ಪ – 3 ಚಮಚ
ಗೋಡಂಬಿ – ಸ್ವಲ್ಪ
ಒಣ ದ್ರಾಕ್ಷಿ – ಸ್ವಲ್ಪ
ಬಾದಾಮಿ – ಸ್ವಲ್ಪ
ಕೋವಾ – 100 ಗ್ರಾಂ
ಹಾಲು – 1 ಬಟ್ಟಲು
ಮಾಡುವ ವಿಧಾನ: ಬೀಟ್ ರೂಟನ್ನು ಚೆನ್ನಾಗಿ ತೊಳೆದು ತುರಿದುಕೊಳ್ಳಬೇಕು. ಬಾಣಲೆಯೊಂದನ್ನು ತೆಗೆದುಕೊಂಡು ಒಲೆಯ ಮೇಲಿಟ್ಟು ಅದಕ್ಕೆ ತುಪ್ಪವನ್ನು ಹಾಕಿ ಕಾಯಿಸಿಕೊಳ್ಳಬೇಕು. ನಂತರ ಇದಕ್ಕೆ ದ್ರಾಕ್ಷಿ, ಗೋಡಂಬಿ, ಬಾದಾಮಿ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ನಂತರ ತುರಿದುಕೊಂಡ ಬೀಟ್ ರೂಟ್’ನ್ನು ತುಪ್ಪದಲ್ಲಿ ಸ್ವಲ್ಪ ಹೊತ್ತು ಹುರಿದುಕೊಳ್ಳಬೇಕು. ಇದಕ್ಕೆ ಹಾಲು ಹಾಗೂ ಕೋವಾ ಹಾಕಿ ಕಡಿಮೆ ಹುರಿಯಲ್ಲಿ ಹುರಿದುಕೊಳ್ಳಬೇಕು. ನಂತರ ಸಕ್ಕರೆ, ಏಲಕ್ಕಿ ಪುಡಿ ಹಾಕಿ ಕಡಿ ಉರಿಯಲ್ಲಿ ಕೈಯಾಡಿಸುತ್ತಾ ಇರಬೇಕು. ಇದಕ್ಕೆ ಹಾಲನ್ನು ಸೇರಿಸಿ ಮಿಶ್ರಣ ಗಟ್ಟಿಯಾಗುವವರೆಗೆ ಬೇಯಿಸಬೇಕು. ಕೊನೆಯಲ್ಲಿ ಹುರಿದುಕೊಂಡ ದ್ರಾಕ್ಷಿ, ಗೋಡಂಬಿ ಹಾಗೂ ಬಾದಾಮಿಯನ್ನು ಸೇರಿಸಿದರೆ ರುಚಿಯಾದ ಬೀಟ್ ರೂಟ್ ಹಲ್ವಾ ಸವಿಯಲು ಸಿದ್ಧವಾಗುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು