ಅಡುಗೆ ಮನೆ

ಪ್ರತಿಯೊಬ್ಬರೂ ಸರಳವಾಗಿ ಮನೆಯಲ್ಲೇ ತಯಾರಿಸಬಹುದಾದ ತಿಂಡಿ ‘ಪುಟ್ಟು’

‘ಪುಟ್ಟು’ ಇದು ಕೇರಳದ ಅತ್ಯಂತ ಫೇಮಸ್ ತಿಂಡಿ. ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಹಲವು ಭಾಗಗಳಲ್ಲಿ ‘ಪುಟ್ಟು’ ತಿಂಡಿ ಮಾಡುತ್ತಿದ್ದಾರೆ. ಈ ಪುಟ್ಟು-ಗಸಿ ಪ್ರತಿಯೊಬ್ಬರೂ ಸರಳವಾಗಿ ಮನೆಯಲ್ಲೇ ತಯಾರು ಮಾಡಬಹುದು.

ಬೇಕಾಗುವ ಸಾಮಾಗ್ರಿಗಳು:
1/2 ಕೆ.ಜಿ ಬೆಳ್ತಿಗೆ ಅಕ್ಕಿ
ತುರಿದ ತೆಂಗಿನ ಕಾಯಿ
ರುಚಿಗೆ ತಕ್ಕ ಉಪ್ಪು
ನೀರು
ಸಕ್ಕರೆ

ಪುಟ್ಟು ಮಾಡುವ ವಿಧಾನ

ಬೆಳ್ತಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆದು ಮೂರು ಗಂಟೆಗಳ ಕಾಲ ನೆನೆಸಿಡಿ. ನೆನೆಸಿದ ಅಕ್ಕಿಯನ್ನು ಸೋಸಿ ಒಂದು ಬಟ್ಟೆಯಲ್ಲಿ ಹರಡಿಕೊಳ್ಳಿ. ನೀರು ಆರಿದ ಮೇಲೆ ಪುಡಿಮಾಡಿಟ್ಟುಕೊಳ್ಳಿ. ಒಂದು ವಿಚಾರ ನೆನಪಿರಲಿ. ನುಣ್ಣನೆಯ ಪುಡಿಯಾಗದಂತೆ ಜಾಗ್ರತೆ ವಹಿಸಿ. ಉಪ್ಪನ್ನು ನೀರಿನೊಂದಿಗೆ ಮಿಶ್ರಣ ಮಾಡಿ ಆ ನೀರನ್ನು ಹಿಟ್ಟಿನ ಮೇಲೆ ಚಿಮುಕಿಸಿ ಕಲಸಿಟ್ಟುಕೊಳ್ಳಿ.

ಪುಟ್ಟು ಮಾಡುವ ಪಾತ್ರೆಯನ್ನು ತೆಗೆದುಕೊಂಡು, ಪಾತ್ರೆಯ ತಳಭಾಗದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಹಾಕಿ ಒಲೆಯಮೇಲಿಟ್ಟುಕೊಳ್ಳಿ. ಪಾತ್ರೆಯ ಮೇಲ್ಭಾಗದಲ್ಲಿರುವ ಕೊಳವೆಯಾಕೃತಿಯ ತಳಭಾಗಕ್ಕೆ ಸ್ವಲ್ಪ ತೆಂಗಿನ ತುರಿಯನ್ನು ಉದುರಿಸಿ. ನಂತರ ಅಕ್ಕಿ ಹಿಟ್ಟನ್ನು ಹಾಕಿ.

ತದನಂತರ ಮತ್ತೆ ತೆಂಗಿನ ತುರಿಯನ್ನು ಸೇರಿಸಿ. ಈ ರೀತಿ ಪದರ ಪದರವಾಗಿ ಅಕ್ಕಿಹಿಟ್ಟು ಹಾಗೂ ತೆಂಗಿನ ತುರಿಯನ್ನು ಸೇರಿಸುತ್ತಾ ಬನ್ನಿ. ಮೇಲ್ಭಾಗದಲ್ಲಿ ತೆಂಗಿನ ತುರಿಯನ್ನು ಹಾಕಿ ಪಾತ್ರೆಯ ಮುಚ್ಚಳ ಹಾಕಿ ಬೇಯಲು ಇಡಿ.

ಸರಿಯಾಗಿ ಹಬೆ ಬಂದನಂತರ ಅಂದರೆ 15 – 20 ನಿಮಿಷ ಬಿಟ್ಟು ಒಲೆಯಿಂದ ಕೆಳಗಿಡಿ. ನಿಧಾನವಾಗಿ ಕೊಳವೆಯಿಂದ ಪುಟ್ಟನ್ನು ಹಾಟ್ ಬಾಕ್ಸ್‍ಗೆ ಸುರಿಯಿರಿ. ಪುಟ್ಟು ರೆಡಿ….

ಬಿಸಿ ಬಿಸಿಯಾದ ಪುಟ್ಟು ಹಾಗೂ ಸಕ್ಕರೆ, ತುಪ್ಪದೊಂದಿಗೆ ಸವಿಯಲು ರುಚಿ. ಕೆಂಪು ಕಡಲೆ ಹಾಗೂ ನೀರುಳ್ಳಿ ಸೇರಿಸಿ ಮಾಡಿದ ಗಸಿಯೊಂದಿಗೆ ಸವಿಯಲು ಬಲುರುಚಿ.

Sneha Gowda

Recent Posts

ತೆಂಗಿನ ಗರಿಯಲ್ಲಿ ಬಸ್‌ ನಿಲ್ದಾಣ ನಿರ್ಮಿಸಿದ ಮಹಿಳೆಯರು

ಆಡಳಿತ ನಾಯಕರ ನಿರ್ಲಕ್ಷ್ಯದಿಂದ ಬೇಸತ್ತು ಸ್ವತಃ ಮಹಿಳೆಯರೇ ಸೇರಿ ತೆಂಗಿನ ಗರಿಯ ಮೂಲಕ ಬಸ್‌ ನಿಲ್ದಾಣ ನಿರ್ಮಿಸಿ ಘಟನೆ ಉತ್ತರ…

1 hour ago

ಮಗುವಿನ ಬೆರಳಿನ ಬದಲು ನಾಲಗೆಗೆ ಶಸ್ತ್ರಚಿಕಿತ್ಸೆ ಮಾಡಿ ವೈದ್ಯರ ಯಡವಟ್ಟು !

ಕೇರಳದ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇಂದು 4 ವರ್ಷದ ಬಾಲಕಿಯೊಬ್ಬಳಿಗೆ ಕೈ ಬೆರಳಿಗೆ ಶಸ್ತ್ರ ಚಿಕಿತ್ಸೆ ಮಾಡುವ ಬದಲು…

2 hours ago

ತೀರ್ಥದಲ್ಲಿ ನಿದ್ರೆ ಬರುವ ಮಾತ್ರೆ ಬೆರೆಸಿ ಅರ್ಚಕನಿಂದ ಟಿವಿ ನಿರೂಪಕಿಯ ಅತ್ಯಾಚಾರ

ತಮಿಳುನಾಡಿನ ಖಾಸಗಿ ಟಿವಿ ಚಾನೆಲ್‌ನ ನಿರೂಪಕಿ, ಚೆನ್ನೈನ ಪ್ರಮುಖ ಅಮ್ಮನ್‌ ದೇವಸ್ಥಾನಗಳಲ್ಲಿ ಒಂದಾಗಿರುವ ಕಾಳಿಕಾಂಪಲ್ ದೇವಸ್ಥಾನದ ಅರ್ಚಕ ಕಾರ್ತಿಕ್‌ ಮುನಿಸ್ವಾಮಿ…

3 hours ago

ಮರಿ ಆನೆಗೆ ಕುಟುಂಬದಿಂದ Z+ ಭದ್ರತೆ: ವಿಡಿಯೋ ವೈರಲ್

ಆನೆಗಳು ಕುಟುಂಬ ಸಮೇತ ಕಾಡಿನಲ್ಲಿ ಹಾಯಾಗಿ ಮಲಗಿ ವಿಶ್ರಾಂತಿ ಪಡೆಯುತ್ತಿರುವ ಕ್ಯೂಟ್ ದೃಶ್ಯವನ್ನು ಕಂಡು ನೆಟ್ಟಿಗರು ಮನಸೋತಿದ್ದಾರೆ.‌ ಹೌದು. .…

3 hours ago

ಆರ್‌ಸಿಬಿ vs ಸಿಎಸ್‌ಕೆ ಫ್ಯಾನ್ಸ್‌ ಗೆ ಎಚ್ಚರಿಕೆ ಕೊಟ್ಟ ಬೆಂಗಳೂರು ಪೊಲೀಸರು

ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ vs ಸಿಎಸ್‌ಕೆ ಪಂದ್ಯಕ್ಕೆ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಎರಡೂ ತಂಡಗಳಿಗೂ…

3 hours ago

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಮೃತ್ಯು

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿ ಟಾಪರ್ ಆಗಿದ್ದ ಗುಜರಾತ್‌ನ ಮೊರ್ಬಿಯ 16 ವರ್ಷದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ.

3 hours ago