News Karnataka Kannada
Monday, May 06 2024
ಅಡುಗೆ ಮನೆ

ಪನ್ನೀರ್ ಬಿರಿಯಾನಿ

Photo Credit :

ಪನ್ನೀರ್ ಬಿರಿಯಾನಿ

ಪ್ರತಿ ದಿನ ತಿಂದದ್ದನ್ನೇ ತಿಂದು ತಿಂದು ಸಾಕಾಗಿಯೇ ಹೋಗಿದೆಯಾ? ಬೆಳಗ್ಗಿನ ಉಪಾಹಾರಕ್ಕೆ ಏನು ಮಾಡಲಿ ಎಂಬ ಚಿಂತೆ ಪ್ರತಿಯೊಬ್ಬ ಗೃಹಿಣಯರಲ್ಲಿ ಇದ್ದೆ ಇರುತ್ತೇ. ಅದಕ್ಯಾಕೆ ಚಿಂತೆ ಮಾಡುವಿರಿ. ಬನ್ನಿ ನಾವು ಇವತ್ತು ಸ್ಪೇಷಲ್ ಪನ್ನೀರ್ ಬಿರಿಯಾನಿ ಮಾಡಿ ಸವಿಯೋಣ.

ಬೇಕಾಗುವ ಸಾಮಾಗ್ರಿಗಳು:
*ಏಕಪ್ರಕಾರವಾಗಿ ತುಂಡು ಮಾಡಿದ ಪನ್ನೀರ್ – 300ಗ್ರಾಂ
*ಅಕ್ಕಿ – 1.ಕೆಜಿ (ಬಾಸ್ಮತಿ ಅಕ್ಕಿಯಾದರೆ ಉತ್ತಮ)
*ಬೇಯಿಸಿದ ಬಟಾಣಿ ಕಾಳು – 1 ಕಪ್
*ಶುಂಠಿ ಮತ್ತು ಬೆಳ್ಳುಳ್ಳಿ ಮಿಶ್ರಣ – 1 ದೊಡ್ಡಚಮಚ
*ಮೊಸರು – 2 ಕಪ್
*ಉದ್ದಕ್ಕೆ ಕತ್ತರಿಸಿದ ಹಸಿಮೆಣಸು- 4 (ಚಿಕ್ಕ ಗಾತ್ರದ್ದಾದರೆ 6)
*ಅರಿಶಿನ ಪುಡಿ – ¼ ಚಿಕ್ಕ ಚಮಚ
*ಒಣಮೆಣಸಿನ ಪುಡಿ – ½ ಚಿಕ್ಕ ಚಮಚ
*ಗರಂ ಮಸಾಲಾ ಪುಡಿ- 1 ಚಿಕ್ಕ ಚಮಚ
*ಏಲಕ್ಕಿ ಪುಡಿ – 2 ಚಿಕ್ಕ ಚಮಚ
*ದಾಲ್ಚಿನ್ನಿ ಎಲೆ – 1 (ಒಣ ಎಲೆ)
*ಕಪ್ಪು ಏಲಕ್ಕಿ – 1
*ಲವಂಗ – 2
*ಕಾಳುಮೆಣಸು-3ರಿಂದ 4
*ಲಿಂಬೆಹಣ್ಣಿನ ರಸ – 1 (ಚಿಕ್ಕ ಗಾತ್ರದ ಲಿಂಬೆಯಾದರೆ 2)
*ಕೇಸರಿ – ½ ಚಿಕ್ಕ ಚಮಚ
*ಹಾಲು – 2 ದೊಡ್ಡ ಚಮಚ
*ಕೊತ್ತಂಬರಿ ಸೊಪ್ಪು – 1 ಚಿಕ್ಕ ಕಟ್ಟು (ನಯವಾಗಿ ಹೆಚ್ಚಿದ್ದು)
*ಪುದಿನಾ ಸೊಪ್ಪಿನ ಎಲೆಗಳು-1 ಚಿಕ್ಕ ಕಟ್ಟು (ನಯವಾಗಿ ಹೆಚ್ಚಿದ್ದು)
*ಅಪ್ಪಟ ತುಪ್ಪ – 2 ದೊಡ್ಡ ಚಮಚ
*ಉಪ್ಪು – ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ: 1) ಅಕ್ಕಿಯನ್ನು ಚೆನ್ನಾಗಿ ತೊಳೆದು ಬೇಯಲು ಇಡಿ. (ಒಂದು ಪ್ರಮಾಣದ ಅಕ್ಕಿಗೆ ಎರಡು ಪ್ರಮಾಣದಷ್ಟು ನೀರು ಹಾಕಿ) ಇದಕ್ಕೆ ಉಪ್ಪು, ದಾಲ್ಚಿನ್ನಿ ಎಲೆ, ಕಪ್ಪು ಏಲಕ್ಕಿ, ಲವಂಗ ಮತ್ತು ಕಾಳುಮೆಣಸು ಹಾಕಿ ಪೂರ್ಣವಾಗಿ ಬೇಯಲು ಕೊಂಚ ಇರುವಂತೆ (ಸುಮಾರು ತೊಂಭತ್ತು ಭಾಗ ಬೆಂದಿರುವಂತೆ) ಇದ್ದಾಗ ಇಳಿಸಿ ನೀರು ಬಸಿಯಿರಿ. ನೀರು ಪೂರ್ಣ ಬಸಿದ ಬಳಿಕ ಒಂದು ಪಕ್ಕದಲ್ಲಿಡಿ. 2) ಒಂದು ಪಾತ್ರೆಯಲ್ಲಿ ಮೊಸರು, ಉಪ್ಪು, ಮೆಣಸಿನ ಪುಡಿ, ಅರಿಸಿನ ಪುಡಿ ಮತ್ತು ಲಿಂಬೆರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಪನ್ನೀರ್‌ನ ತುಂಡುಗಳನ್ನು ಸೇರಿಸಿ ಎಲ್ಲಾ ಪನ್ನೀರ್ ತುಂಡುಗಳೂ ದ್ರವದಲ್ಲಿ ಅವೃತ್ತವಾಗುವಂತೆ ಮಿಶ್ರಣ ಮಾಡಿ ಪಕ್ಕದಲ್ಲಿಡಿ. ಪನ್ನೀರ್ ತುಂಡಾಗದಂತೆ ಅಥವಾ ಪುಡಿಯಾಗದಂತೆ ಎಚ್ಚರ ವಹಿಸಿ. 3) ಒಂದು ಲೋಟದಲ್ಲಿ ಹಾಲು ಮತ್ತು ಕೇಸರಿ ಪುಡಿಯನ್ನು ಮಿಶ್ರಣ ಮಾಡಿ ಪಕ್ಕದಲ್ಲಿಡಿ.

*ಒಂದು ಬಾಣಲೆಯಲ್ಲಿ ತುಪ್ಪ ಹಾಕಿ ಚಿಕ್ಕ ಉರಿಯಲ್ಲಿ ಬಿಸಿಮಾಡಿ. ತುಪ್ಪ ಕರಗಿದ ಬಳಿಕ ಹಸಿಮೆಣಸು, ಶುಂಠಿ ಬೆಳ್ಳುಳ್ಳಿ ಮಿಶ್ರಣ ಸೇರಿಸಿ ಹುರಿಯಿರಿ. ಕೆಲವು ಕ್ಷಣಗಳ ಬಳಿಕ ಪನ್ನೀರ್ ತುಂಡುಗಳನ್ನು (ಮೇಲಿನ ಸಂಖ್ಯೆ 2 ರಲ್ಲಿ ಸಿದ್ದ ಮಾಡಿಟ್ಟಿದ್ದಂತೆ) ಸೇರಿಸಿ ಹುರಿಯಿರಿ.
*ಪನ್ನೀರ್‌ನ ಎಲ್ಲಾ ಬದಿಗಳು ಕೊಂಚ ನಸುಗಂದು ಬರುವವರೆಗೆ ಹುರಿಯಿರಿ. ಈಗ ದಪ್ಪತಳದ ಮತ್ತು ಅಗಲವಾದ ಪಾತ್ರೆಯೊಂದನ್ನು ಚಿಕ್ಕ ಉರಿಯ ಮೇಲಿರಿಸಿ.
*ಇನ್ನು ಒಂದು ಪದರ ಅಕ್ಕಿಯನ್ನು(ಮೇಲಿನ ಸಂಖ್ಯೆ 1 ರಲ್ಲಿ ಸಿದ್ಧ ಮಾಡಿಟ್ಟಿದ್ದಂತೆ) ಹರಡಿ ಅದರ ಮೇಲೆ ಹುರಿದ ಪನ್ನೀರ್ ಹರಡಿ. ಇದರ ಮೇಲೆ ಅಕ್ಕಿಯ ಇನ್ನೊಂದು ಪದರ ಹರಡಿ ಅದರ ಮೇಲೆ ಬೇಯಿಸಿದ ಬಣಾಣಿ, ಗರಂ ಮಸಾಲೆ ಪುಡಿ, ಏಲಕ್ಕಿ ಪುಡಿ, ಹಾಲು ಮತ್ತು ಕೇಸರಿ (ಮೇಲಿನ ಸಂಖ್ಯೆ 3 ರಲ್ಲಿ ಸಿದ್ಧ ಮಾಡಿಟ್ಟಿದ್ದಂತೆ), ಕೊತ್ತಂಬರಿ ಮತ್ತು ಪುದಿನಾ ಸೊಪ್ಪು, ಹರಡಿ. ಕೊಂಚ ಕರಗಿದ ತುಪ್ಪವನ್ನು ಕೊಂಚ ಕೊಂಚವಾಗಿ ಹರಡುವಂತೆ ಚಿಮುಕಿಸಿ.
*ತದನಂತರ ಉಳಿದ ಎಲ್ಲಾ ಅಕ್ಕಿಯನ್ನು ಇದರ ಮೇಲೆ ಹರಡಿ ಏಕಪ್ರಕಾರವಾಗಿರುವಂತೆ ಚಪ್ಪಟೆ ಚಮಚದಲ್ಲಿ ಸವರಿ. ಈ ಪಾತ್ರೆಯ ಮುಚ್ಚಳವನ್ನು ಬಿಗಿಯಾಗಿ ಮುಚ್ಚಿ.
*ಇಷ್ಟೆಲ್ಲಾ ಆದ ನಂತರ ಮಧ್ಯಮಕ್ಕಿಂತ ಕೊಂಚ ಕೆಳಗಿನ ಉರಿಯಲ್ಲಿ ಸುಮಾರು ಹತ್ತು ನಿಮಿಷ ಹಬೆಯಲ್ಲಿ ಬೇಯಲು ಬಿಡಿ. ಹತ್ತು ನಿಮಿಷದ ಬಳಿಕ ಉರಿಯಿಂದಿಳಿಸಿ, ಆ ಕೂಡಲೇ ಮುಚ್ಚಳ ತೆರೆಯಬೇಡಿ, ಇನ್ನೂ ಸುಮಾರು ಹತ್ತು ನಿಮಿಷ ಅಥವಾ ಹದಿನೈದು ನಿಮಿಷ ಹಾಗೆಯೇ ತಣಿಯಲು ಬಿಡಿ. ಬಿಸಿಬಿಸಿಯಿರುವಂತೆಯೇ ಬಡಿಸಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು