ಗರಿ ಗರಿಯಾದ ಸಿಹಿತಿಂಡಿಗಳನ್ನು ಬೇಕರಿಗಳಿಂದ ಖರೀದಿಸಿ ತಿನ್ನೊದಕ್ಕಿಂತ, ಸ್ವತ: ಮನೆಯಲ್ಲಿ ತಯಾರಿಸಿ ಸವಿದರೆ ತುಂಬಾ ಚೆನ್ನಾಗಿರುತ್ತೆ. ಸಿಹಿತಿಂಡಿಗಳಲ್ಲಿ ಒಂದಾದ ಜಿಲೇಬಿ ಬಹುತೇಕ ಜನರಿಗೆ ಅಚ್ಚುಮೆಚ್ಚು. ಬನ್ನಿ ನಾವು ಇವತ್ತು ಜಿಲೇಬಿ ತಯಾರಿಸೋದು ಹೇಗೆ ಎಂದು ತಿಳಿಯೋಣ.
ಬೇಕಾಗುವ ಸಾಮಗ್ರಿಗಳು:
ಮೊಸರು 1/2 ಕಪ್
ಕೇಸರಿ 4 ದಳ
ತುಪ್ಪ 1/2 ಕಪ್
ಕಪ್ ಸಕ್ಕರೆ 1 1/2
ಮೈದಾ 2 ಕಪ್
ತಯಾರಿಸುವ ವಿಧಾನ :
ಮೈದಾ ಹಿಟ್ಟಿಗೆ ಮೊಸರು ಹಾಗೂ ಎರಡು ಕಪ್ ನೀರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಹೀಗೆ ಮಾಡಿಟ್ಟ ಹಿಟ್ಟನ್ನು 24 ಗಂಟೆಗಳ ಕಾಲ ಇಡಿ.
ನಂತರ ತುಪ್ಪವನ್ನು ಒಂದು ಪ್ಯಾನ್ಗೆ ಹಾಕಿ ಬಿಸಿ ಮಾಡಿ.
ಬಟ್ಟೆಯೊಂದರಲ್ಲಿ ತೂತು ಮಾಡಿ ಆ ಬಟ್ಟೆಗೆ ಜಿಲೇಬಿ ಹಿಟ್ಟನ್ನು ಹಾಕಿ ನೇರವಾಗಿ ಬಿಸಿಯಾದ ತುಪ್ಪಕ್ಕೆ ಹಾಗೇ ಜಿಲೇಬಿ ಆಕಾರದಲ್ಲಿ ಹಿಟ್ಟನ್ನು ಹಾಕಿ.
ಹೊಂಬಣ್ಣ ಬರುವವರೆಗೆ ಜಿಲೇಬಿಯನ್ನುಕರಿಯಿರಿ.
ಮತ್ತೊಂದು ಪ್ಯಾನ್ನಲ್ಲಿ ಪ್ರತ್ಯೇಕವಾಗಿ ಸಕ್ಕರೆ ಮತ್ತು ನೀರನ್ನು ಸೇರಿಸಿ ಕುದಿಯಲು ಬಿಟ್ಟು ಗಟ್ಟಿಯಾದ ಸಕ್ಕರೆ ಪಾಕ ಮಾಡಿಡಿ.
ಈ ಪಾಕಕ್ಕೆ ಕೇಸರಿ ದಳಗಳನ್ನು ಉದುರಿಸಿ. ಹೊಂಬಣ್ಣ ಬಂದ ಜಿಲೇಬಿಯನ್ನು ಮಾಡಿಟ್ಟ ಸಕ್ಕರೆ ಪಾಕಕ್ಕೆ ಹಾಕಿ.
ಈಗ ಬಿಸಿ ಬಿಸಿಯಾದ ಟೇಸ್ಟಿ ಜಿಲೆಬಿ ಸವಿಯಲು ರೆಡಿ.