ಚಿಕನ್ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ನಾನ್ ವೆಜ್ ಪ್ರಿಯರಿಗೆ ಚಿಕನ್ ಎಂದರೆ ಬಾಯಲ್ಲಿ ನೀರೂರಿಯುತ್ತೆ. ಅದರಲ್ಲೂ ಚಿಕನ್ ಪಾಪ್ ಕಾರ್ನ್ ಬಲೂ ರೇಸ್ಟ್ಟಿ. ಬನ್ನಿ ನಾವು ಇವತ್ತು ಚಿಕನ್ ಪಾಪ್ ಕಾರ್ನ್ ಸವಿಯೋಣ.
ಬೇಕಾಗುವ ಸಾಮಾಗ್ರಿಗಳು:
1/2 ಕೆ.ಜಿ ಬೋನ್ ಲೆಸ್ ಚಿಕನ್
2 ಚಮಚ ಕೆಂಪು ಮೆಣಸಿನ ಪುಡಿ
1 ಚಮಚ ಮೆಣಸಿನ ಪುಡಿ
ಅರಿಶಿನ ಪುಡಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್
1 ಮೊಟ್ಟೆ
2 ಚಮಚ ಬ್ರೆಡ್ ಪುಡಿ
1 ಚಮಚ ಗರಂ ಮಸಾಲಾ
ಅರ್ಧ ಕಪ್ ಕಾರ್ನ್ ಪ್ಲೋರ್
ರುಚಿಗೆ ತಕ್ಕಷ್ಟು ಉಪ್ಪು
ಕರಿಯಲು ಎಣ್ಣೆ
ತಯಾರಿಸುವ ವಿಧಾನ: ಮೊದಲಿಗೆ ಚಿಕನ್ ಅನ್ನು ಚೆನ್ನಾಗಿ ತೊಳೆದು ನೀರನ್ನು ಬಸಿದುಕೊಳ್ಳಿ. ನಂತರ ಸಣ್ಣ ತುಂಡುಗಳಾಗಿ ಕತ್ತರಿಸಿ. ಉಪ್ಪು, ಮೆಣಸಿನಕಾಯಿ ಪುಡಿ, ಕರಿಮೆಣಸಿನ ಪುಡಿ, ಗರಂ ಮಸಲಾ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಿಶಿನ ಪುಡಿ, ಬ್ರೆಡ್ ಪುಡಿಯನ್ನು ಚಿಕನ್ಗೆ ಸೇರಿಸಿ ಮಿಕ್ಸ್ ಮಾಡಿ. ಮಿಕ್ಸ್ ಮಾಡಿದ ನಂತರ ಅರ್ಧ ಗಂಟೆ ನೆನೆಯಲು ಬಿಡಿ. ಸ್ಟವ್ ಹಚ್ಚಿ ಎಣ್ಣೆ ಕಾಯಲು ಬಿಡಿ. ನೆನೆದ ಚಿಕನ್ ಮಿಕ್ಸ್ ಅನ್ನು ಮೊದಲಿಗೆ ಮೊಟ್ಟೆಯ ಬಿಳಿಯ ಭಾಗದಲ್ಲಿ ಅದ್ದಿ ನಂತರ ಅದನ್ನು ಕಾರ್ನ್ ಫ್ಲೋರ್ ಗೆ ಅದ್ದಿ. ಕಾದ ಎಣ್ಣೆಯಲ್ಲಿ ಗೋಲ್ಡನ್ ಬ್ರೌನ್ ಬರುವವರೆಗೂ ಕರಿಯರಿ. ಇದೀಗ ಚಿಕನ್ ಪಾಪ್ ಕಾರ್ನ್ ರೆಡಿ .