News Karnataka Kannada
Sunday, May 19 2024
ಅಡುಗೆ ಮನೆ

ಗರಂ ಸಬಸ್ಸಿಗೆ ಸೊಪ್ಪು ವಡೆ ಸೇವಿಸೋದೇ ಮಜಾ!

Photo Credit :

ಗರಂ ಸಬಸ್ಸಿಗೆ ಸೊಪ್ಪು ವಡೆ ಸೇವಿಸೋದೇ ಮಜಾ!

ಮಸಾಲೆ ವಡೆ ಎಲ್ಲರಿಗೂ ಇಷ್ಟವಾಗುತ್ತದೆ. ಅದರಂತೆ ಮಸಾಲೆ ಜತೆಗೆ ಸಬಸ್ಸಿಗೆ ಸೊಪ್ಪನ್ನು ಬೆರೆಸಿ ಮಾಡಿದರೆ ಚೆನ್ನಾಗಿರುತ್ತದೆ. ಸಂಜೆಯ ಕಾಫಿಗೆ ಗರಂ ಎನ್ನುವ ಸಬಸ್ಸಿಗೆ ಸೊಪ್ಪಿನ ವಡೆ ಇನ್ನಷ್ಟು ಮಜಾ ಕೊಡುತ್ತದೆ.

ಸಬಸ್ಸಿಗೆ ಸೊಪ್ಪಿನ ವಡೆ ಮಾಡುವುದು ಹೇಗೆ ಮತ್ತು ಅದಕ್ಕೆ ಬೇಕಾಗುವ ಪದಾರ್ಥಗಳೇನು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಸಬಸ್ಸಿಗೆ ವಡೆ ಮಾಡಲು ಬೇಕಾಗುವ ಪದಾರ್ಥಗಳು

ಸಬಸ್ಸಿಗೆ ಸೊಪ್ಪು- ಒಂದು ಕಟ್ಟು

ಕಡಲೆಬೇಳೆ- ಒಂದು ಕಪ್

ತೊಗರಿಬೇಳೆ- ಕಾಲು ಕಪ್

ಈರುಳ್ಳಿ- ಒಂದು

ಕೊತ್ತಂಬರಿ ಸೊಪ್ಪು- ಸ್ವಲ್ಪ

ಕರಿಬೇವು- ಸ್ವಲ್ಪ

ಹಸಿಮೆಣಸಿನ ಕಾಯಿ- ಮೂರು(ಖಾರಕ್ಕೆ ತಕ್ಕಂತೆ ಬಳಸಿಕೊಳ್ಳಬೇಕು)

ಉಪ್ಪು-ರುಚಿಗೆ ತಕ್ಕಂತೆ

ಎಣ್ಣೆ- ಕರಿಯಲು ಬೇಕಾಗುವಷ್ಟು

ಸಬಸ್ಸಿಗೆ ವಡೆ ಮಾಡುವ ವಿಧಾನ ಹೀಗಿದೆ.

ಮೊದಲಿಗೆ ಬೇಳೆಗಳನ್ನು ನೀರಿನಲ್ಲಿ ನೆನೆಯಲು ಹಾಕಬೇಕು( ಬೆಳಗ್ಗೆ ಮಾಡುವುದಾದರೆ ರಾತ್ರಿ, ಸಂಜೆ ಮಾಡುವುದಾದರೆ ಬೆಳಗ್ಗೆ ನೆನೆಯಲು ಹಾಕಿದರೆ ಉತ್ತಮ) ಇನ್ನೊಂದು ಕಡೆ ಸಬಸ್ಸಿಗೆ ಸೊಪ್ಪನ್ನು ಸಣ್ಣಗೆ ಹಚ್ಚಿಕೊಳ್ಳಬೇಕು. ಅದೇ ರೀತಿ ಕೊತ್ತಂಬರಿ, ಕರಿಬೇವು, ಈರುಳ್ಳಿ, ಮೆಣಸಿನಕಾಯಿಯನ್ನು ಹಚ್ಚಿಟ್ಟುಕೊಳ್ಳಬೇಕು.

ನೆನೆಯಲು ಹಾಕಿದ ಬೇಳೆಗಳನ್ನು ನೀರಿನಿಂದ ಬಸಿದು ತೆಗೆದು ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಗಟ್ಟಿಯಾಗಿ ರುಬ್ಬಬೇಕು. ಬಳಿಕ ಅದಕ್ಕೆ ಹಚ್ಚಿಟ್ಟ ಸೊಪ್ಪು ಮತ್ತು ಈರುಳ್ಳಿ, ಹಸಿಮೆಣಸನ್ನು ಸೇರಿಸಿ ಕಲೆಸಬೇಕು. ಆ ನಂತರ ಚಪ್ಪಟೆಯಾಕಾರದಲ್ಲಿ ಹೇಗೆ ಬೇಕೋ ಹಾಗೆ ಮಾಡಿಕೊಂಡು ಕಾದ ಎಣ್ಣೆಯಲ್ಲಿ ಹಾಕಿ ಬೇಯಿಸಿ ತೆಗೆದರೆ ಸಬಸ್ಸಿಗೆ ಸೊಪ್ಪು ವಡೆ ರೆಡಿ. ಇದನ್ನು ಬಿಸಿಯಾಗಿದ್ದಾಗಲೇ ತಿಂದರೆ ಚೆನ್ನಾಗಿರುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು