ಆಫೀಸ್ ಕೆಲಸ ಮುಗಿಸಿ ಮನೆಗೆ ಬರಬೇಕಾದರೆ ತುಂಬಾ ಸುಸ್ತಾಗಿ ಹೋಗಿರುತ್ತೇವೆ. ಮಳೆಗಾಲದಲ್ಲಂತೂ ಮನೆಗೆ ಬಂದು ಬಿಸಿ ಬಿಸಿ ಏನಾದರೂ ಕುಡಿಯೋಣ ಅನಿಸುತ್ತೆ. ಅದಕ್ಕಾಗಿ ನಾವು ಇವತತ್ಯ ಸುಲಭವಾಗಿ , ಬೇಗನೆ ರೆಡಿ ಆಗೋ ಕೊರಿಯಂಡರ್-ಲೆಮನ್ ಸೂಪ್ ತಯಾರಿಸಿ ಕುಡಿಯೋಣ.
ಬೇಕಾಗುವ ಪದಾರ್ಥಗಳು
ಕೊತ್ತಂಬರಿ ಸೊಪ್ಪು 1 ಕಟ್ಟು
ಲೆಮೆನ್ ಝೆಸ್ಟ್(ನಿಂಬೆ ಸಿಪ್ಪೆಯ ಪುಡಿ)
ನಿಂಬೆ ರಸ 2 ಚಮಚ
ನೀರು 5 ಕಪ್
ತರಕಾರಿ ಮಿಶ್ರಣ (ಬೇಬಿ ಕಾರ್ನ್, ಬೀನ್ಸ್, ಜೋಳ, ಕ್ಯಾರೆಟ್, ಕ್ಯಾಬೇಜ್)
ಹಸಿಮೆಣಸು 2
1 ಕಪ್ ಈರುಳ್ಳಿ
ಕರಿಮೆಣಸಿನ ಪುಡಿ ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ
ಮೊದಲಿಗೆ ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದು ಕತ್ತರಿಸಿ. ನಂತರ ಅದನ್ನು ಹಾಗೂ ಅದರ ಜೊತೆ ಹಸಿಮೆಣಸು, ಲೆಮೆನ್ ಝೆಸ್ಟ್ ಮತ್ತು ನಾಲ್ಕು ಗ್ಲಾಸ್ ನೀರು ಹಾಕಿ ಒಂದು ಪ್ಯಾನ್ನಲ್ಲಿ ಕುದಿಬರಿಸಿ. ಇದನ್ನು ಐದು ನಿಮಿಷಗಳ ಕಾಲ ಸಣ್ಣ ಬೆಂಕಿಯಲ್ಲಿ ಬೇಯಿಸಿ. ಲೆಮೆನ್ ಝೆಸ್ಟ್ ಚೆನ್ನಾಗಿ ಬೇಯುವುದು ತುಂಬಾ ಮುಖ್ಯವಾಗಿದೆ. ಯಾಕೆಂದರೆ ಇದರಿಂದ ಉತ್ತಮ ಫ್ಲೇವರ್ ದೊರೆಯುತ್ತದೆ. ಈಗ ಅದನ್ನು ಸ್ಟೌನಿಂದ ಇಳಿಸಿ ಕೊತ್ತಂಬರಿ ಸೊಪ್ಪನ್ನು ತೆಗೆಯಬಹುದು. ನಂತರ ಇನ್ನೊಂದು ಪ್ಯಾನ್ ತೆಗೆದುಕೊಂಡು ಅದರಲ್ಲಿ ಒಂದು ಕಪ್ ನೀರು ಹಾಕಿ ಕತ್ತರಿಸಿದ ತರಕಾರಿಗಳನ್ನು ಹಾಕಿ ಬೇಯಿಸಿ ಈ ತರಕಾರಿಗಳು 2 ನಿಮಿಷದವರೆಗೆ ಬೇಯಲಿ. ಇದಕ್ಕೆ ಕೊತ್ತಂಬರಿ ಮತ್ತು ಲೆಮೆನ್ನಿಂದ ಮಾಡಿದಂತಹ ನೀರನ್ನು ಸೇರಿಸಬೇಕು. ಈ ಮಿಶ್ರಣವನ್ನು 5 ನಿಮಿಷದವರೆಗೆ ಚೆನ್ನಾಗಿ ಬೇಯಿಸಿ. ಇದಕ್ಕೆ ಉಪ್ಪು ಮತ್ತು ಕರಿಮೆಣಸಿನ ಪುಡಿ ಬೆರೆಸಿ. ಈಗ ಟೇಸ್ಟಿಯಾದ ಸೂಪ್ ಸವಿಯಲು ರೆಡಿ.
ಇದನ್ನು ಸರ್ವ್ ಮಾಡುವಾಗ ನೀವು ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿ ಸರ್ವ್ ಮಾಡಿ.