News Karnataka Kannada
Monday, May 06 2024
ಅಡುಗೆ ಮನೆ

ಎಲ್ಲಾ ವಯಸ್ಸಿನವರಿಗೂ ಇಷ್ಟವಾಗುವ ಸಿಹಿ ಖಾದ್ಯ – ರವೆ ಪಾಯಸ

Rava Kheer
Photo Credit :

ಹೆಚ್ಚು ಸಮಯವಿಲ್ಲದ ವೇಳೆಯಲ್ಲಿ ಸುಲಭವಾಗಿ ತಯಾರಿಸಬಹುದು ರವೆ ಪಾಯಸ. ಗಂಜಿಯಂತೆ ಹೋಲುವ ಈ ಸಿಹಿ ಖಾದ್ಯ ಸಾಮಾನ್ಯವಾಗಿ ಎಲ್ಲಾ ವಯಸ್ಸಿನವರಿಗೂ ಇಷ್ಟವಾಗುವುದು. ಅಲ್ಲದೆ ಸುಲಭವಾಗಿ ಜೀರ್ಣವಾಗುವುದು. ಇದನ್ನು ಕೆಲವು ಸ್ಥಳಗಳಿಗೆ ತಕ್ಕಂತೆ ವಿವಿಧ ಹೆಸರುಗಳಿಂದ ಕರೆಯುತ್ತಾರೆ. ರವೆ ಪಾಯಸ, ಸೂಜಿ ರವೆ ಪಾಯಸ, ಗೋಧಿರವೆ ಪಾಯಸ ಹೀಗೆ ವಿವಿಧ ಬಗೆಯಲ್ಲಿ ಹೆಸರಿಸುತ್ತಾರೆ.

-ರವೆ-1 ಟೇಬಲ್ ಸ್ಪೂನ್, ಸಕ್ಕರೆ-1 ಟೇಬಲ್ ಸ್ಪೂನ್, ತುಪ್ಪ-1/2 ಟೀ ಸ್ಪೂನ್, ನೀರು-1/2 ಕಪ್, ಹಾಲು-2 ಟೇಬಲ್ ಸ್ಪೂನ್.

-ಗ್ಯಾಸ್ ಮೇಲೆ ಬಾಣಲೆ ಇಟ್ಟು ಅದಕ್ಕೆ ತುಪ್ಪ ಹಾಕಿ ಅದು ಬಿಸಿಯಾಗುತ್ತಿದ್ದಂತೆ ರವೆ ಹಾಕಿ ಪರಿಮಳ ಬರುವವರಗೆ ಹುರಿದುಕೊಳ್ಳಿ. ನಂತರ ಇದಕ್ಕೆ ಸಕ್ಕರೆ ಹಾಕಿ ನೀರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಸಣ್ಣ ಉರಿಯಲ್ಲಿ 6 ನಿಮಿಷಗಳ ಕಾಲ ಕುದಿಸಿ ನಂತರ ಇದಕ್ಕೆ ಹಾಲು ಸೇರಿಸಿ 5 ನಿಮಿಷಗಳ ಕಾಲ ಕುದಿಸಿ ಗ್ಯಾಸ್ ಆಫ್ ಮಾಡಿ ಹದ ಬಿಸಿ ಇರುವಾಗಲೇ ಮಗುವಿಗೆ ತಿನ್ನಿಸಿ.ಪಾಯಸದ ರೀತಿ ಇರುವುದರಿಂದ ಮಗು ಚೆನ್ನಾಗಿ ತಿನ್ನುತ್ತದೆ. ಹಾಗೇ ಇದು ಆರೋಗ್ಯಕ್ಕೂ ಕೂಡ ಒಳ್ಳೆಯದು. ಸಕ್ಕರೆ ಬದಲು ಬೆಲ್ಲ ಕೂಡ ಬಳಸಬಹುದು. ಆದರೆ ಈ ಮಿಶ್ರಣಕ್ಕೆ ಬೆಲ್ಲ ಬಳಸುವಾಗ ಗ್ಯಾಸ್ ಆಫ್ ಮಾಡಿ ನಂತರ ಬಳಸಿ. ಇಲ್ಲದಿದ್ದರೆ ಹಾಲು ಒಡೆಯುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು