ಇಂದು ಎಲ್ಲರ ಮನೆಯಲ್ಲೂ “ಕರ್ಜಿ ಕಾಯಿ” ನೀವು ಮಾಡಲು ತಯಾರಿದ್ದೀರ ಹಾಗಿದ್ದರೆ ಇಲ್ಲಿದೆ ಮಾಡುವ ವಿಧಾನ

ಎಲ್ಲಾ ಹಬ್ಬಗಳಲ್ಲಾ ಸಾಮಾನ್ಯವಾಗಿ ಮಾಡುವ ಸಿಹಿ ತಿಂಡಿ “ಕರ್ಜಿ ಕಾಯಿ”
ಮಾಡುವ ವಿಧಾನ  :  ಮೊದಲು ಕಣಕದ ಹಿಟ್ಟು ಕಲೆಸಿ.

1 ಲೋಟ ಚಿರೋಟಿ ರವೆಗೆ 2 ಚಮಚ ಮೈದಾ ಹಿಟ್ಟು, ಚಿಟಿಕೆ ಉಪ್ಪು, 4 ಚಮಚ ಕಾದ ತುಪ್ಪ ಹಾಕಿ ಕಲೆಸಿ ಸ್ವಲ್ಪ ನೀರು ಹಾಕಿ ಪೂರಿ ಹಿಟ್ಚಿನ ಹದಕ್ಕೆ ಕಲೆಸಿ 1/2 ಗಂಟೆ ಮುಚ್ಚಿಡಿ.

ಹೂರಣಕ್ಕೆ :- 1/2 ಲೋಟ ಕಡಲೇ ಬೀಜ ಹುರಿದು ಸಿಪ್ಪೆ ತೆಗೆದಿಡಿ.

2 ಚಮಚ ಬಿಳಿ ಎಳ್ಳು ಹುರಿದಿಡಿ.

4 ಚಮಚ ಒಣ ಕೊಬ್ಬರಿ ತುರಿದಿಡಿ.

2 ಚಮಚ ಹುರಿಗಡಲೆ ಆರಿಸಿಡಿ.

1 ಚಮಚ ಗಸಗಸೆ ಹುರಿದಿಡಿ .

1 1/2 ಲೋಟ ಬೆಲ್ಲ ತುರಿದಿಡಿ.

4 ಏಲಕ್ಕಿ ಪುಡಿ ಮಾಡಿಡಿ.

 

ಮೊದಲು ಕಡಲೇ ಬೀಜ, ಹುರಿಗಡಲೆ, ಬಿಳಿ ಎಳ್ಳು, ಗಸಗಸೆ, ಕೊಬ್ಬರಿ ತುರಿ ಪುಡಿ ಮಾಡಿ, ನಂತರ ಬೆಲ್ಲ ಹಾಕಿ ಸ್ವಲ್ಪ ಮತ್ತೆ ಪುಡಿ ಮಾಡಿ ಏಲಕ್ಕಿ ಪುಡಿ ಹಾಕಿ ಕಲೆಸಿದರೆ ಹೂರಣದ ಪುಡಿ ಸಿದ್ಧ.

ಕಣಕದ ಹಿಟ್ಟನ್ನು ಮತ್ತಷ್ಟು ನಾದಿ ಚಿಕ್ಕ ಚಿಕ್ಕ ಪೂರಿ ಲಟ್ಟಿಸಿ ಮಧ್ಯದಲ್ಲಿ ಹೂರಣದ ಪುಡಿ ಹಾಕಿ ಸುತ್ತಲೂ ನೀರು ಸವರಿ ಮಡಚಿ ಅಂಚುಗಳನ್ನು ಅಂಟಿಸಿ ಒತ್ತಿ ಕಾದ ಎಣ್ಣೆಯಲ್ಲಿ ಹಾಕಿ ಗರಿ ಗರಿಯಾಗಿ ಕರಿದು ಗಾಳಿಯಾಡದ ಡಬ್ಬದಲ್ಲಿ ಹಾಕಿಡಿ.

ನೀವು ಬೇಕಾದರೆ ಕೊಬ್ಬರಿ ತುರಿ, ಸಕ್ಕರೆ ಪುಡಿ, ಏಲಕ್ಕಿ ಪುಡಿ ಸೇರಿಸಿ ಹೂರಣದ ಪುಡಿ ಮಾಡಬಹುದು. ಅಥವಾ ಕಾಯಿ ತುರಿಗೆ ಬೆಲ್ಲ ತುರಿ ಹಾಕಿ ಕುದಿಸಿ ಏಲಕ್ಕಿ ಪುಡಿ, ಹುರಿದ ಗಸಗಸೆ ಸ್ವಲ್ಪ ಸೇರಿಸಿ ಕುದಿಸಿ ಹೂರಣದ ಉಂಡೆ ಮಾಡಿ ಕರಿಗಡುಬು ಮಾಡಬಹುದು‌. ಅಥವಾ ತೊಗರಿ ಬೇಳೆ ಬೇಯಿಸಿ ಬೆಲ್ಲದ ಜೊತೆ ಕುದಿಸಿ ಕಾಯಿತುರಿ, ಏಲಕ್ಕಿ ಪುಡಿ ಹಾಕಿ ರುಬ್ಬಿ ಹೂರಣದ ಉಂಡೆ ಮಾಡಿ ಕರಿಯಬಹುದು.

Sneha Gowda

Recent Posts

ಅಂಜಲಿ ಅಂಬಿಗೇರ ಕೊಲೆ ಪ್ರಕರಣ: ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ ರಾಜೀವ್ ಅಮಾನತು

ಅಂಜಲಿ ಅಂಬಿಗೇರ ಕೊಲೆ  ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ.ರಾಜೀವ್ ಅಮಾನತು ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವೈಫಲ್ಯ ಹಿನ್ನೆಲೆ  ಅಮಾನತು…

49 mins ago

ಹುಬ್ಬಳ್ಳಿ ಕೊಲೆ ಪ್ರಕರಣ : ಆರೋಪಿ ಎನ್‌ಕೌಂಟರ್‌ಗೆ ಆಗ್ರಹ

ಹುಬ್ಬಳ್ಳಿಯ ವೀರಾಪುರ ಓಣಿ ನಿವಾಸಿ ಅಂಜಲಿ ಅಂಬಿಗೇರ್‌ ಕೊಲೆ ಆರೋಪಿಗೆ ಎನ್‌ಕೌಂಟರ್‌ ಮಾಡಬೇಕೆಂದು ಟೋಕರೆ ಕೋಳಿ ಸಮಾಜ ಸಂಘ ಆಗ್ರಹಿಸಿದೆ.

1 hour ago

ಗತವೈಭವ ಸಾರುವ ಅಪರೂಪದ ಸಂಗೀತ ರುದ್ರೇಶ್ವರ ದೇವಸ್ಥಾನ

ಚಾಲುಕ್ಯರ ಕಾಲದಲ್ಲಿ ಸಂಗೀತ ವಿಶ್ವವಿದ್ಯಾಲಯದ ತಾಣವಾಗಿದ್ದ ಗೋರಟಾ(ಬಿ)ದಲ್ಲಿ ಗತವೈಭವ ಸಾರುವ ಸದುದ್ದೇಶದಿಂದ ಸಂಗೀತ ರುದ್ರೇಶ್ವರರ ವಿಶಿಷ್ಟ ಮತ್ತು ಅಪರೂಪದ ದೇವಸ್ಥಾನ…

1 hour ago

ನ್ಯೂಸ್ ಕರ್ನಾಟಕ ವರದಿಗೆ ಎಚ್ಚೆತ್ತ ತಾಲ್ಲೂಕು ಆಡಳಿತ : ಗ್ರಾಮಕ್ಕೆ ತಹಶೀಲ್ದಾರ್ ಭೇಟಿ

ಸಮಸ್ಯೆ ಬಗೆಹರಿಸಿ ಇಲ್ಲದಿದ್ದರೆ ಒಂದು ತೊಟ್ಟು ವಿಷ ಕೊಡಿ ಎಂದು ಗ್ರಾಮವನ್ನೇ ತೊರೆಯಲು ಮುಂದಾಗಿದ್ದ ಗ್ರಾಮಸ್ಥರಿಗೆ ನಂಜನಗೂಡು ತಹಶೀಲ್ದಾರ್ ಶಿವಕುಮಾರ್…

2 hours ago

ಭಗವಂತ ಖೂಬಾ ಹ್ಯಾಟ್ರಿಕ್‌ ಜಯ ನಿಶ್ಚಿತ : ಶೈಲೇಂದ್ರ

ಮೂರನೇ ಸಲ ಕೇಂದ್ರ ಸಚಿವ ಭಗವಂತ ಖೂಬಾ ಅವರು ಬೀದರ್‌ ಲೋಕಸಭಾ ಕ್ಷೇತ್ರದಿಂದ ಜಯ ಗಳಿಸುವುದು ನಿಶ್ಚಿತ' ಎಂದು ಬಿಜೆಪಿ…

2 hours ago

ಭಾರತೀಯರಿಗೆ ಗುಡ್‌ ನ್ಯೂಸ್‌ : ವೀಸಾ ಇಲ್ಲದೆ ರಷ್ಯಾಕ್ಕೆ ಹೋಗುವ ಅವಕಾಶ

ವಿದೇಶಕ್ಕೆ ಸುತ್ತಬೇಕು ಎನ್ನುವ ಪ್ರವಾಸಿಗರಿಗೆ ಒಂದು ಶುಭ ಸುದ್ದಿ. ಭಾರತೀಯರು ಇನ್ನು ಶೀಘ್ರದಲ್ಲೇ ವೀಸಾ ಇಲ್ಲದೆ ರಷ್ಯಾ ಪ್ರವಾಸ ಮಾಡಬಹುದು.…

2 hours ago