News Karnataka Kannada
Sunday, May 19 2024
ಅಡುಗೆ ಮನೆ

ಆಮ್ಲೇಟ್ ಗ್ರೇವಿ

Photo Credit :

ಆಮ್ಲೇಟ್ ಗ್ರೇವಿ

ಮೊಟ್ಟೆ ಎಂದರೆ ಎಲ್ಲರಿಗೂ ಪ್ರಿಯ. ಮೊಟ್ಟೆಯಿಂದ ವಿಧ ವಿಧದ ತಿನಸನ್ನು ತಯಾರಿಸಬಹುದು. ಇವತ್ತು ನಾವು ಆಮ್ಲೇಟ್ ಗ್ರೇವಿ ತಯಾರಿಸಿ ಸವಿಯೋಣ.

ಬೇಕಾಗುವ ಪದಾರ್ಥಗಳು
ಮೊಟ್ಟೆ – 6
ಎಣ್ಣೆ – ಸ್ವಲ್ಪ
ಈರುಳ್ಳಿ – 2
ಉಪ್ಪು – ರುಚಿಗೆ ತಕ್ಕಷ್ಟು
ಅಚ್ಚ ಖಾರದ ಪುಡಿ – 1 ಚಮಚ
ಹಸಿ ಮೆಣಸಿನಕಾಯಿ – 2
ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಅರಿಶಿಣದ ಪುಡಿ – ಅರ್ಧ ಚಮಚ
ದನಿಯಾ ಪುಡಿ – ಅರ್ಧ ಚಮಚ
ಟೊಮೆಟೊ ಪ್ಯೂರಿ – ಅರ್ಧ ಬಟ್ಟಲು
ತೆಂಗಿನ ಹಾಲು – 1 ಕಪ್
ಗರಂ ಮಸಾಲ – ಅರ್ಧ ಚಮಚ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಸಾಸಿವೆ – ಸ್ವಲ್ಪ
ಕರಿಬೇವಿನ ಎಲೆ – ಸ್ವಲ್ಪ

ತಯಾರಿಸುವ ವಿಧಾನ
ಒಲೆಯ ಮೇಲೆ ಬಾಣಲೆಯನ್ನು ಇಟ್ಟು ಸ್ವಲ್ಪ ಎಣ್ಣೆ ಹಾಕಿ. ಎಣ್ಣೆ ಕಾದ ನಂತರ ಇದಕ್ಕೆ ಈರುಳ್ಳಿ ಹಾಕಿ ಚಿನ್ನದ ಬಣ್ಣ ಬರುವವರೆಗೆ ಹುರಿದುಕೊಳ್ಳಿ ನಂತರ ಇದಕ್ಕೆ ಹಸಿಮೆಣಸಿನ ಕಾಯಿ ಸ್ವಲ್ಪ ಉಪ್ಪು ಹಾಕಿ ಆಮ್ಲೆಟ್ ತಯಾರು ಮಾಡಿಕೊಳ್ಳಬೇಕು. ಮತ್ತೆ ಒಲೆಯ ಮೇಲೆ ಪಾತ್ರೆಯೊಂದನ್ನು ಇಟ್ಟು ಬಿಸಿ ಮಾಡಿ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಬೇಕಿ. ಎಣ್ಣೆ ಬಿಸಿಯಾದ ನಂತರ ಸಾಸಿವೆ ಮತ್ತು ಕರಿಬೇವಿನ ಎಲೆ ಹಾಕಿ ಒಗ್ಗರಣೆ ಮಾಡಿಕೊಳ್ಳಬೇಕು. ಇದಕ್ಕೆ ಮತ್ತೆ ಸ್ವಲ್ಪ ಈರುಳ್ಳಿ ಹಾಕಿ ಕೆಂಪಗೆ ಮಾಡಿಕೊಳ್ಳಬೇಕು. ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ 1 ನಿಮಿಷ ಫ್ರೈ ಮಾಡಿಕೊಳ್ಳಿ. ಇದಕ್ಕೆ ರುಬ್ಬಿಕೊಂಡ ಟೊಮೆಟೊ ಪ್ಯೂರಿ ಹಾಕಿ 5 ನಿಮಿಷಗಳ ಕಾಲ ಬಿಟ್ಟು ನಂತರ ಖಾರದ ಪುಡಿ, ದನಿಯಾ ಪುಡಿ, ಗರಂ ಮಸಾಲ, ಅರಿಶಿಣ ಹಾಕಿ 2 ನಿಮಿಷ ಫ್ರೈ ಮಾಡಿದ. ಈ ಮಿಶ್ರಣಕ್ಕೆ ತೆಂಗಿನ ಹಾಲು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಗ್ರೇವಿಯಾಗವವರೆಗೆ ಕುದಿಸಿ. ಇದಕ್ಕೆ ಈ ಮೊದಲೇ ಮಾಡಿಟ್ಟುಕೊಂಡಿದ್ದ ಆಮ್ಲೆಟ್ ನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ ಆಮ್ಲೆಟ್ ಗ್ರೇವಿ ಸವಿಯಲು ಸಿದ್ಧವಾಗುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು