ಇತ್ತೀಚಿನ ತಂದೆ ತಾಯಂದಿರಿಗೆ ತಮ್ಮ ಮಗುವಿಗೆ ಯಾವ ಹೆಸರಿಡಬೇಕು ಅನ್ನುವ ಚಿಂತೆಯೇ ಹೆಚ್ಚು. ಎಲ್ಲಾ ಮಕ್ಕಳಿಗಿಂತ ವಿಭಿನ್ನ ಹೆಸರಿಡುತ್ತಾರೆ.
ಅಂತಹದ್ದೇ ಒಂದು ಜೋಡಿ ಈಗ ತಮ್ಮ ಮಕ್ಕಳಿಗೆ ನಾಲ್ಕೇ ನಾಲ್ಕು ಅಕ್ಷರ ಬಳಸಿ ಹೆಸರಿಡುವ ಮೂಲಕ ಸುದ್ದಿಯಾಗಿದ್ದಾರೆ.
ಬೆಲ್ಜಿಯಂ ಮೂಲದ ಗ್ವೆನಿ ಬ್ಲಾಂಕರ್ಟ್ ಮತ್ತು ಮರಿನೋ ವಾನೀನೋ ದಂಪತಿಗೆ 11 ಮಕ್ಕಳು.
ಇವರಲ್ಲಿ 7 ಹೆಣ್ಣು, 4 ಗಂಡು ಮಕ್ಕಳು. ಮೊದಲ ಎರಡು ಮಕ್ಕಳಿಗೆ ಅಲೆಕ್ಸ್ ಮತ್ತು ಆಕ್ಸೆಲ್ ಎಂದು ಹೆಸರಿಟ್ಟಿದ್ದಾರೆ. ನಂತರ ಉಳಿದ 9 ಮಕ್ಕಳಿಗೆ ಎ, ಇ, ಎಲ್ ಮತ್ತು ಎಕ್ಸ್ ಅಕ್ಷರಗಳಿಂದಲೇ ಹೆಸರಿಟ್ಟಿದ್ದಾರೆ.
ಅಲೆಕ್ಸ್, ಆಕ್ಸೆಲ್, ಕ್ಸೆಲಾ, ಲೆಕ್ಸಾ, ಕ್ಸೇಲ್, ಕ್ಸೀಲ್, ಎಕ್ಸಲಾ, ಲೀಕ್ಸ್, ಕ್ಸೀಎಲ್, ಎಲಾಕ್ಸ್ ಮತ್ತು ಅಲ್ಕ್ಸ್ ಎಂದು ಹೆಸರಿಟ್ಟಿದ್ದಾರೆ.
ಮುಂದಿನ ವರ್ಷ 12ನೇ ಮಗುವಿಗೆ ಜನ್ಮ ನೀಡಲಿರುವ ಮರಿನೋ ಇದೇ ನಾಲ್ಕು ಅಕ್ಷರಗಳನ್ನು ಬಳಸಿ ಹೆಸರಿಡಲು ಉತ್ಸುಕರಾಗಿದ್ದಾರೆ.