News Karnataka Kannada
Sunday, May 05 2024
ಇತರೆ

ಆಕರ್ಷಣೀಯ ಲವ್ ಬರ್ಡ್ ಗಳು

Love Birds
Photo Credit :

ಪ್ರಕೃತಿಯೊಂದಿಗೆ ಬದುಕುವುದು ಸುಂದರವಾದ ಸಂಗತಿ. ಅದೆಷ್ಟೋ ಬಗೆಯ ಪಕ್ಷಿಗಳು ಪರಿಸರದಲ್ಲಿ ಕಾಣಸಿಗುತ್ತವೆ. ಅದರಲ್ಲೂ ಬಣ್ಣ ಬಣ್ಣದ ಹಕ್ಕಿಗಳು ಹಾರಾಡುತ್ತಾ ಸಾಗಿದಾಗ ದಿನವೂ ಹೊಸತು ಹೊಸತು ಎನಿಸುತ್ತದೆ . ಜೀವವೈವಿಧ್ಯದಲ್ಲಿ ಹಕ್ಕಿಗಳದ್ದೇ ವಿಶಿಷ್ಟ ವಿಸ್ಮಯಕಾರಿ ಜಗತ್ತು. ಹಕ್ಕಿಯೊಂದರ ಬದುಕನ್ನು ಬೆಂಬೆತ್ತಿದರೆ ಹತ್ತು ಹಲವು ಕೌತುಕದ ವಿಷಯಗಳು ತಿಳಿಯುತ್ತವೆ. ಆದರೆ ಹಕ್ಕಿಯ ಜಾಡು ಹಿಡಿಯವುದು ಸುಲಭವಲ್ಲ.
ಪ್ರಕೃತಿಯ ಹಲವು ಅಚ್ಚರಿಗಳಲ್ಲಿ ಈ ಪಕ್ಷಿ ಪ್ರಪಂಚವೂ ಒಂದು ಗಮನಿಸಿದಷ್ಟು ಹೊಸ ಹೊಸ ಸಂಗತಿಗಳು;ಪರಿಸರದಲ್ಲಿರುವ ಪ್ರತಿಯೊಂದು ಜೀವಿಗೂ ಅದರದೇ ಮಹತ್ವವಿದೆ. ಅದರಲ್ಲೂ ಲವ್ ಬರ್ಡ್ಸ್ ಅಂತ ಹಕ್ಕಿಗಳು ವಿಶೇಷವಾದ ಗುಣಗಳನ್ನು ಹೊಂದಿದೆ.

ಈ ಹಕ್ಕಿ ನೋಡಲು ತುಂಬಾ ಆಕರ್ಷಣೀಯವಾಗಿರುತ್ತದೆ , ಇವುಗಳಲ್ಲಿ ಒಟ್ಟು ಒಂಬತ್ತು ಜಾತಿಯ ಲವ್‌ಬರ್ಡ್ಸ್ ಗಳಿವೆ , ಸುಮಾರು 15 ವರ್ಷಗಳ ಕಾಲ ಜೀವಿಸುತ್ತವೆ. ಅನೇಕ ವೈವಿಧ್ಯಮಯ ಬಣ್ಣಗಳಲ್ಲಿ ಇವುಗಳು ಕಾಣಸಿಗುತ್ತವೆ. ಆದರೂ ಹೆಚ್ಚಾಗಿ ನೀಲಿ, ಬಿಳಿ ,
ಹಸಿರು ಅಥವಾ ಹಳದಿ ಬಣ್ಣಗಳು ಸರ್ವೆಸಾಮಾನ್ಯ. ಅವುಗಳನ್ನು ನೋಡುವುದೇ ಕಣ್ಣಿಗೆ ಮತ್ತು ಮನಸ್ಸಿಗೆ ಹಬ್ಬವಾಗಿರುತ್ತೆ.

ಮನುಷ್ಯರಂತೆ ಶಿಸ್ತಿನಲ್ಲಿ ಇವುಗಳು ಆಹಾರ ಸೇವಿಸುತ್ತದೆ. ಇನ್ನು ಬೇರೆ ಹಕ್ಕಿಗಳ ಆಹಾರವನ್ನು ಸೇವಿಸುವುದಿಲ್ಲ . ತಾಜಾ ಹಣ್ಣುಗಳು, ಹಸಿರು ತರಕಾರಿಗಳನ್ನು ಚಿಕ್ಕದಾಗಿ ಕತ್ತರಿಸಿ ಕೊಡಬೇಕು. ಬಟಾಣಿ, ತುಳಸಿ ಎಲೆ , ಕ್ಯಾರೆಟ್, ಮಾವಿನಹಣ್ಣು, ಪಪ್ಪಾಯಿ, ದ್ರಾಕ್ಷಿ, ಪಾಲಕ್, ಕೊತ್ತಂಬ್ಬರಿ , ಮೆಂತ್ಯೆ ಸೊಪ್ಪು
ಜೋಳಗಳೆಂದರೆ ಅವುಗಳಿಗೆ ಪ್ರಿಯವಾದ ಆಹಾರವಾಗಿದೆ.

ಬೇರೆ ಹಕ್ಕಿಯಂತೆ ಅಲ್ಲ ಏಕೆಂದರೆ ಇವುಗಳಿಗೆ ಪಂಜರದಲ್ಲಿ ಇರುವುದೆಂದರೆ ಇಷ್ಟ ಹಾಗಾಗಿ ಹತ್ತಲು, ಹಾರಲು ಮತ್ತು ಆಡಲು ವಿಶಾಲವಾದ ಪಂಜರ ಸಿದ್ದಪಡಿಸಿದರೆ ಉತ್ತಮ, ನೇರವಾದ ಸೂರ್ಯನ ಬೆಳಕಿನಲ್ಲಿಡಬಾರದು. ಇದರಿಂದ ಅವುಗಳಿಗೆ ಕಿರಿಕಿರಿ ಎನಿಸುತ್ತದೆ ಜೊತೆಗೆ ಅವುಗಳನ್ನು ತುಂಬಾ ಸ್ವಚ್ಚವಾಗಿ
ಇಟ್ಟುಕೊಳ್ಳಬೇಕು, ಹಾಗಾಗಿ ಆಹಾರ ಮತ್ತು ನೀರಿನ ಪಾತ್ರೆಯನ್ನು ನಿತ್ಯ ಶುಚಿಗೊಳಿಸಬೇಕು.
ಬ್ಯಾಕ್ಟೀರಿಯಯುಕ್ತ ಆಹಾರಗಳು ಹಕ್ಕಿಗಳ ಅನಾರೋಗ್ಯ ಅಥವಾ ಸಾವನ್ನಪ್ಪುತ್ತದೆ . ಪಂಜರವನ್ನು ಕನಿಷ್ಠ ವಾರಕ್ಕೊಮ್ಮೆಯಾದರೂ ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು. ಬೇರೆ ಜಾತಿಯ ಪಕ್ಷಿಗಳೊಂದಿಗೆ ಒಂದೇ ಪಂಜರದಲ್ಲಿ ಇರಿಸಬಾರದು. ಏಕೆಂದರೆ ಈ ಹಕ್ಕಿಗಳು ಬೇರೆ ಜಾತಿಯ ಹಕ್ಕಿಗಳ ಒಂದಿಗೆ ಬೆರೆಯುವುದಿಲ್ಲ. ವ್ಯಾಲೆಂಟೈನ್ಸ್ ಡೇ , ಬರ್ತಡೆಗೆ ಗಿಫ್ಟ್ ಗಳ ಜೊತೆಗೆ ವಿಶೇಷವಾದದು ಏನಾದರೂ ತರಬೇಕೆಂದು ಬಯಸುವವರು ಲವ್ ಬರ್ಡ್ಸ್ ಉಡುಗರೆಯಾಗಿ ಕೊಡಬಹುದು.

ಎಷ್ಟು ಬಾರಿ ಪ್ರಾಣಿ-ಪಕ್ಷಿಗಳಿಗೆ ಇರುವ ನಿಷ್ಕಲ್ಮಶ ಪ್ರೀತಿ ಮನುಷ್ಯರಲ್ಲಿ ಯಾಕೆ ಇರಲ್ಲ .? ಎಂಬ ಪ್ರಶ್ನೆ ಕಾಡಿತು ಇದೆ.
ಸ್ವಲ್ಪ ಪ್ರೀತಿ ತೋರಿಸಿದರೆ ಸಾಕು,ಬೆಟ್ಟದಷ್ಟು ಪ್ರೀತಿ ನೀಡುತ್ತದೆ. ದಿನವಿಡಿ ರೆಕ್ಕೆ ಬಿಚ್ಚಿ ಗೂಡಿನಲ್ಲಿ ಚಿಲಿಪಿಲಿನಾದ, ಹತ್ತಿರ ಬಂದರೆ ಏಕೆ ಇಷ್ಟು ತಡವಾಗಿ ಬಂದೆ ಎಂಬ ಮುನಿಸು . ಆದರೂ ಪರವಾಗಿಲ್ಲ ಎಂದು ಪ್ರೀತಿ ಹಂಚುತ್ತದೆ . ಇನ್ನು ಲಾಕ್ಡೌನ್ ಸಮಯದಲ್ಲಿ ಲವ್ ಬರ್ಡ್ಸ್ ಬರಿ ಪಕ್ಷಿ ಆಗಿರಲಿಲ್ಲ ನನಗೆ ಅವರೊಂದಿಗೆ ಕಳೆದ ಕ್ಷಣಗಳು ಅಪೂರ್ವ. ಒಂದು ರೀತಿಯಲ್ಲಿ ಅವುಗಳು ನನ್ನ ಆಪ್ತ ಸ್ನೇಹಿತರಾಗಿದ್ದರು.

ಆಕರ್ಷ ಆರಿಗ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
4295
akarsha ariga

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು