ಬೆಂಗಳೂರು: ಯುವ ರಾಜ್‌ಕುಮಾರ್- ಶ್ರೀದೇವಿ ಭೈರಪ್ಪ ನಡುವಿನ ವಿಚ್ಛೇದನ ಅರ್ಜಿ ಬೆನ್ನಲ್ಲೇ ಸಪ್ತಮಿ ಗೌಡ ಅವರ ಹೆಸರೂ ಈ ಕೇಸ್‌ನಲ್ಲಿ ತಳುಕು ಹಾಕಿಕೊಂಡಿದೆ. ಅದರಂತೆ, ಇದೀಗ ಇದೇ ಯುವ ಚಿತ್ರದ ಸುದ್ದಿಗೋಷ್ಠಿ ಸಂದರ್ಭದಲ್ಲಿನ ಯುವ ಮತ್ತು ಸಪ್ತಮಿ ನಡುವಿನ ಆಪ್ತತೆಯ ಕಿರು ವಿಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಅಪ್ಪ ರಾಘವೇಂದ್ರ ರಾಜ್‌ಕುಮಾರ್ ಮತ್ತು ಅಮ್ಮನ ಭುಜದ ಮೇಲೆ ಯುವ ಕೈ ಹಾಕಿ ಫೋಟೋಕ್ಕೆ ಪೋಸ್ ಕೊಟ್ಟಿದ್ದಾರೆ. ಅಪ್ಪನ ಪಕ್ಕದಲ್ಲಿ ಸಪ್ತಮಿ ಗೌಡ ನಿಂತಿದ್ದಾರೆ. ಅಪ್ಪನ ಮೇಲೆ ಕೈ ಹಾಕುವ ನೆಪದಲ್ಲಿ ಸಪ್ತಮಿ ಅವರಿಗೂ ಕಿರುಬೆರಳಿನಲ್ಲಿಯೇ ಟೀಸ್ ಮಾಡಿದ್ದಾರೆ. ಯುವ ಅವರ ಈ ವರ್ತನೆಗೆ ಸಪ್ತಮಿ ಕೊಂಚ ಮುಜುಗರಕ್ಕೀಡಾದಂತೆ ವಿಡಿಯೋದಲ್ಲಿ ಕಂಡಿದೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಶ್ರೀದೇವಿ ಭೈರಪ್ಪ ವಿರುದ್ಧ ಒಂದಷ್ಟು ಆರೋಪಗಳನ್ನು ಮಾಡಿ ಕೌಟುಂಬಿಕ ಕೋರ್ಟ್‌ಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು ನಟ ಯುವ ರಾಜ್‌ಕುಮಾರ್. ಐದು ವರ್ಷಗಳ ಪ್ರೀತಿಯಲ್ಲಿದ್ದ ಈ ಜೋಡಿ, ಬಳಿಕ 2019ರಲ್ಲಿ ಅದ್ಧೂರಿ ವಿವಾಹ ಮಾಡಿಕೊಂಡಿತ್ತು. ಹೀಗಿರುವಾಗಲೇ ಜೂನ್ 6ರಂದು ಯುವ ಕಡೆಯಿಂದ ಡಿವೋರ್ಸ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು. ಪತ್ನಿ ಶ್ರೀದೇವಿ ಭೈರಪ್ಪಗೂ ಲೀಗಲ್ ನೋಟೀಸ್ ರವಾನೆಯಾಗಿತ್ತು. ಹಾಗೆ ಬಂದ ನೋಟೀಸ್‌ಗೆ ತಮ್ಮ ವಕೀಲರಿಂದಲೇ ಖಡಕ್ ಉತ್ತರ ಕೊಟ್ಟಿದ್ದರು ಶ್ರೀದೇವಿ.
ಸಪ್ತಮಿ ಗೌಡ ಅವರೊಂದಿಗೆ ಯುವ ಕಳೆದ ಒಂದು ವರ್ಷದಿಂದ ಅಫೇರ್ ಹೊಂದಿದ್ದಾರೆ. ಇವರಿಬ್ಬರೂ ರಿಲೇಷನ್‌ಶಿಪ್‌ನಲ್ಲಿದ್ದಾರೆ. 2023ರ ಡಿಸೆಂಬರ್‌ನಲ್ಲಿ ಅಮೆರಿಕಾದಿಂದ ಭಾರತಕ್ಕೆ ಮರಳಿದಾಗ ಇವರಿಬ್ಬರೂ ಖಾಸಗಿ ಹೊಟೇಲ್ ರೂಮ್‌ನಲ್ಲಿ ಇದ್ದರು” ಎಂದೂ ಶ್ರೀದೇವಿ ನೋಟೀಸ್‌ಗೆ ಉತ್ತರಿಸಿದ್ದರು.
ಈ ವಿಚಾರವೂ ವಿಚ್ಛೇದನದ ಕಾವು ಹೆಚ್ಚಿಸಿತ್ತು. ಇದಕ್ಕೆ ಪ್ರತಿಯಾಗಿ ನಟಿ ಸಪ್ತಮಿ ಗೌಡ ಶ್ರೀದೇವಿ ವಿರುದ್ಧ ಮಾನನಷ್ಟ ಮೊಕದ್ದಮೆ ಕೇಸ್ ಹಾಕಿದ್ದರು. ಶ್ರೀದೇವಿ ಭೈರಪ್ಪ ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿ, ಚಾರಿತ್ರ್ಯವಧೆ ಮಾಡುತ್ತಿದ್ದಾರೆ. ಈ ವಿಚಾರ ನನ್ನ ವೃತ್ತಿ ಜೀವನ ಸೇರಿ ವೈಯಕ್ತಿಕ ಬದುಕಿಗೂ ಡ್ಯಾಮೇಜ್ ಮಾಡಿದೆ ಎಂದು 10 ಕೋಟಿ ಪರಿಹಾರಕ್ಕೆ ಅರ್ಜಿ ಹಾಕಿದ್ದರು.
ನಾವ್ ಏನನ್ನು ನೋಡ್ಲಿಲ್ಲ ನಿಮಗೆ ಏನಾದ್ರು ಕಾಣುಸ್ತಾ#DBoss @dasadarshan #Darshan #yuvarajkumar pic.twitter.com/ciBNzJMprw
— DBoss Samrajya (@DbossSamrajyaa) June 20, 2024

