ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ಯಜಮಾನ’ ಧಾರಾವಾಹಿ ಮೂಲಕ ಕಿರುತೆರೆ ಲೋಕಕ್ಕೆ ಕಾಲಿಟ್ಟ ಸ್ಫೂರ್ತಿ ರಮಿತಾ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ʻಯಜಮಾನʼ ಧಾರಾವಾಹಿಯಲ್ಲಿ ಪಲ್ಲವಿ ಎಂಬ ನೆಗೆಟಿವ್ ಪಾತ್ರದ ಮೂಲಕ ಮನೆಮಾತಾದ ಸ್ಫೂರ್ತಿ ರಮಿತಾ ಸದ್ಯ ಹೊಸ ಜೀವನಕ್ಕೆ ಹೆಜ್ಜೆ ಇಡುತ್ತಿದ್ದಾರೆ.
ಇತ್ತೀಚೆಗೆ ಸ್ಫೂರ್ತಿ ಅವರ ನಿಶ್ಚಿತಾರ್ಥ ನಡೆದಿದ್ದು, ಈ ಸಮಾರಂಭದ ಫೋಟೊಗಳನ್ನು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ನಿಶ್ಚಿತಾರ್ಥದ ಫೋಟೊಗಳನ್ನು ನೋಡಿದ ಅಭಿಮಾನಿಗಳು ಹಾಗೂ ಕಿರುತೆರೆ ತಾರೆಯರು ಜೋಡಿಗೆ ಕಮೆಂಟ್‌ಗಳ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ.
ಇನ್ನು, ನಟಿ ಸ್ಫೂರ್ತಿ ಅವರು ಫೋಟೊದಲ್ಲಿ ತಮ್ಮ ಭಾವಿ ಪತಿಯನ್ನು ಮುಖವನ್ನು ತೋರಿಸಿಲ್ಲ. ಹೀಗಾಗಿ ಹುಡುಗ ಯಾರಿರಬಹುದು ಎಂದು ಅಭಿಮಾನಿಗಳಲ್ಲಿ ಕುತೂಹಲ ಮನೆಮಾಡಿದೆ.

