ಮುಂಬೈ: ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ನಟಿ ರಶ್ಮಿಕಾ ಮಂದಣ್ಣ ನಟಿಸಿರುವ ಅನಿಮಲ್ ಚಿತ್ರವು ವಿಶ್ವದಾದ್ಯಂತ ಬಿಡುಗಡೆಗೊಂಡಿದೆ. ಈ ಸಿನಿಮಾವು ಆರು ದಿನಗಳಲ್ಲಿ ಒಟ್ಟು ₹527.6 ಕೋಟಿ ಗಳಿಸಿದೆ.
ಈ ಕುರಿತು ಪ್ರೊಡಕ್ಷನ್ ಹೌಸ್ ಟಿ–ಸೀರಿಸ್ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಅನಿಮಲ್ ಚಿತ್ರದ ಕಲೆಕ್ಷನ್ ಅಪ್ಡೇಟ್ ಹಂಚಿಕೊಂಡಿದೆ.
ಅರ್ಜುನ್ ರೆಡ್ಡಿ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಅನಿಮಲ್’ ಸಿನಿಮಾವು ಡಿಸೆಂಬರ್ 1 ರಂದು ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು.
ಅನಿಮಲ್ ಚಿತ್ರವನ್ನು ಭೂಷಣ್ ಕುಮಾರ್, ಕೃಷ್ಣ ಕುಮಾರ್ ಅವರ ಟಿ–ಸೀರೀಸ್, ಮುರಡ್ ಖೇತನ್ ಅವರ ಸಿನಿ ಒನ್ ಸ್ಟೋಡಿಯೊ ಮತ್ತು ಪ್ರಣಯ್ ರೆಡ್ಡಿ ವಂಗಾ ಅವರ ಭದ್ರಕಾಳಿ ಪಿಕ್ಚರ್ಸ್ ನಿರ್ಮಿಸಿದೆ.
ಚಿತ್ರದಲ್ಲಿ ರಣಬೀರ್ ಕಪೂರ್ ಪತ್ನಿಯ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದು, ಅನಿಲ್ ಕಪೂರ್ ಅವರು ರಣಬೀರ್ ತಂದೆಯಾಗಿ ನಟಿಸಿದ್ದಾರೆ. ತಂದೆ–ಮಗನ ಸಂಬಂಧ ಸೇರಿದಂತೆ ಅಪರಾಧದ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸಿದೆ.