ಕನ್ನಡದ ಬಹುನಿರೀಕ್ಷಿತ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​​ 11 ತೆರೆಗೆ ಬರೋದಕ್ಕೆ ತಯಾರಿ ನಡೆಸುತ್ತಿದೆ ಅನ್ನೋ ಸುದ್ದಿ ಸದ್ದು ಮಾಡ್ತಿದೆ. ಹೀಗಾಗಿ ಸಾಕಷ್ಟು ಅಭಿಮಾನಿಗಳು ಯಾವಾಗಪ್ಪ ಬಿಗ್​ಬಾಸ್​ ಬರುತ್ತೆ​ ​ಅಂತ ಕಾಯುತ್ತಿದ್ದಾರೆ.

ಈ ಬಾರಿಯ ಬಿಗ್​ಬಾಸ್​ ಹೋಸ್ಟ್ ಮಾಡಲು ಕಿಚ್ಚ ಸುದೀಪ್​ ಬದಲು ಬೇರೆ ಸ್ಟಾರ್​ ನಟ ಬರುತ್ತಾರೆ ಎಂದು ಊಹಾಪೋಹಗಳು ಹರಿದಾಡುತ್ತಿದ್ದವು. ಈ ಬಗ್ಗೆ ಕಿಚ್ಚ ಸುದೀಪ್ ಮಾತನಾಡಿದ್ದಾರೆ.

ಬೆಂಗಳೂರಲ್ಲಿ ಇಂದು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ ಅವರು, ಬಿಗ್​ಬಾಸ್​ನಲ್ಲಿ ಹತ್ತು ವರ್ಷದ ಜರ್ನಿ ಡೆಡಿಕೇಟ್ ಮಾಡಿದ್ದೇನೆ. ಬಿಗ್​ಬಾಸ್ ಅನ್ನೋದು ದೊಡ್ಡ ಎಫರ್ಟ್. ಬಿಗ್​ಬಾಸ್​ ನಾನು ನಡೆಸಿಕೊಡ್ತೇನೆ ಅಂತ ನಿಮಗೆ ಗೊತ್ತು. ಆದರೆ ಬಿಗ್​ಬಾಸ್​ ನಡೆಸಿಕೊಡೋಕೆ ನಾನು ಏನೆಲ್ಲಾ ಮಾಡ್ತೀನಿ ಅಂತ ಯಾರಿಗೂ ಗೊತ್ತಿಲ್ಲ ಎಂದರು.