ಉಡುಪಿ: ಅಶ್ವಿನಿ ಪುನೀತ್ ರಾಜಕುಮಾರ್ ಉಡುಪಿಯ ಕಾಪು ತಾಲೂಕಿನಲ್ಲಿರುವ ಹೊಸ ಮಾರಿಗುಡಿ ದೇವಾಲಯಕ್ಕೆ ಭೇಟಿ ನೀಡಿದರು. ಇತ್ತೀಚೆಗಷ್ಟೇ ಹೊಸ ಮಾರಿಗುಡಿ ದೇವಾಲಯ ಬ್ರಹ್ಮಕಲಶ ಉತ್ಸವವನ್ನು ಪೂರೈಸಿದೆ.

ಮಾರಿಯಮ್ಮ ಹಾಗೂ ಉಚ್ಚಂಗಿ ದೇವಿಯ ದರ್ಶನವನ್ನು ಪುನೀತ್ ರಾಜಕುಮಾರ್ ಪತ್ನಿ ಪಡೆದರು. ಜೀರ್ಣೋದ್ಧಾರಗೊಂಡ ದೇವಾಲಯವನ್ನು ಅಶ್ವಿನಿ ವೀಕ್ಷಣೆ ಮಾಡಿದರು.

ಮಾರಿಯಮ್ಮನ ನವದುರ್ಗ ಲೇಖನ ಪುಸ್ತಕವನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಪಡೆದರು. ನವದುರ್ಗ ಶ್ಲೋಕಗಳನ್ನು ಬರೆಯುವ ಸಂಕಲ್ಪ ಮಾಡಿದರು. ದೇಗುಲದ ವತಿಯಿಂದ ಗೌರವಾರ್ಪಣೆ ಸಲ್ಲಿಸಲಾಯಿತು.