Bengaluru 22°C
Ad

ಇಂದು ವಿಶ್ವ ಫಾದರ್ಸ್​ ಡೇ; ದರ್ಶನ್​ ನೆನೆದು ಮಗ ವಿನೀಶ್​ ಭಾವುಕ ಪೋಸ್ಟ್​

Vinish

ಬೆಂಗಳೂರು: ಇಂದು ವಿಶ್ವ ತಂದೆಯಂದಿರ ದಿನ. ಈ ದಿನದಂದು ಸ್ಯಾಂಡಲ್​ವುಡ್​ ನಟ ದರ್ಶನ್​ನನ್ನು ಮಗ ವಿನೀಶ್ ದರ್ಶನ್ ನೆನೆಸಿಕೊಂಡಿದ್ದಾರೆ. ಫಾದರ್ಸ್​ ಡೇಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ತಿಳಿಸಿದ್ದಾರೆ.

ಆದರೆ ಅತ್ತ ತಂದೆ ಕೊಲೆ ಕೇಸ್​ನಲ್ಲಿ ಪೊಲೀಸ್​ ವಶದಲ್ಲಿದ್ದಾರೆ. ಹೀಗಿರುವಾಗ ಅಪ್ಪನಿಗಾಗಿ ಮಗನ ಹೃದಯ ಮಿಡಿದಿದೆ. ಇನ್​​ಸ್ಟಾಗ್ರಾಂನಲ್ಲಿ ದರ್ಶನ್​ ಮತ್ತು ತಾಯಿ ವಿಜಯಲಕ್ಷ್ಮೀ ಜೊತೆಗಿನ ಫೋಟೋವನ್ನು ಮಗ ಹಂಚಿಕೊಂಡಿದ್ದಾನೆ.

ವಿಶ್ವ ತಂದೆಯಂದಿರ ದಿನದಂದು ಮಗ ವಿನೀಶ್, ‘ನಿಮ್ಮನ್ನ ನಾನು ಮಿಸ್ ಮಾಡಿಕೊಳ್ತಿದ್ದೇನೆ. ನಿಮ್ಮನ್ನ ನಾನು ಅಪಾರವಾಗಿ ಪ್ರೀತಿಸುತ್ತಿದ್ದೇನೆ. ಯಾವತ್ತಿಗೂ ನೀವೇ ನನ್ನ ಹೀರೋ ಅಪ್ಪ’ ಎಂದು ವಿನೀಶ್ ಬರೆದಿದ್ದಾರೆ. ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಆ್ಯಂಡ್​ ಗ್ಯಾಂಗ್​ ಅರೆಸ್ಟ್​ ಆಗಿದೆ. ನಿನ್ನೆ ಕೋರ್ಟ್​ಗೆ ದರ್ಶನ್​ ಅವರನ್ನು ಹಾಜರುಪಡಿಸಲಾಗಿತ್ತು. ಆದರೆ ಕೋರ್ಟ್​ ಮತ್ತೆ 5 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ನೀಡಿದೆ.

Ad
Ad
Nk Channel Final 21 09 2023
Ad