ವಿಕ್ಕಿ ಕೌಶಲ್ ಅವರು ‘ಬ್ಯಾಡ್ ನ್ಯೂಸ್’ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಸಿನಿಮಾ ಅಂದುಕೊಂಡ ಮಟ್ಟದ ವಿಮರ್ಶೆ ಪಡೆದಿಲ್ಲ. ರಿಲೀಸ್ ಆದ ಕೆಲವೇ ದಿನಕ್ಕೆ ಕಳಪೆ ಪ್ರದರ್ಶನ ಕಂಡಿದೆ. ಆದಾಗ್ಯೂ ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಒಂದು ಹಂತಕ್ಕೆ ಗಳಿಕೆ ಮಾಡುತ್ತಿದೆ. ಇದು ಚಿತ್ರ ತಂಡದ ಖುಷಿ ಹೆಚ್ಚಿಸಿದೆ. ವಾರದ ದಿನಗಳಲ್ಲಿ ಸಿನಿಮಾದ ಗಳಿಕೆ ಯಾವ ರೀತಿಯಲ್ಲಿ ಆಗಲಿದೆ ಅನ್ನೋದು ಮುಖ್ಯವಾಗಲಿದೆ.
ವಿಕ್ಕಿ ಕೌಶಲ್ ಅವರು ‘ಬ್ಯಾಡ್ ನ್ಯೂಸ್’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆನಂದ್ ತಿವಾರಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ವಿಕ್ಕಿ ಕೌಶಲ್, ತೃಪ್ತಿ ದಿಮ್ರಿ, ಆ್ಯಮಿ ವಿರ್ಕ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ.ಈ ಚಿತ್ರ ಬುಕ್ ಮೈ ಶೋನಲ್ಲಿ 6.2 ಹಾಗೂ ಐಎಂಡಿಬಿಯಲ್ಲಿ 6.7 ರೇಟಿಂಗ್ ಪಡೆದುಕೊಂಡಿದೆ. ಆದಾಗ್ಯೂ ವೀಕೆಂಡ್ನಲ್ಲಿ ಚಿತ್ರಕ್ಕೆ ಒಳ್ಳೆಯ ಗಳಿಕೆ ಆಗಿದೆ.
ಶುಕ್ರವಾರ (ಜುಲೈ 19) ಈ ಸಿನಿಮಾ 8.3 ಕೋಟಿ ರೂಪಾಯಿ ಗಳಿಕೆ ಮಾಡಿತು. ಶನಿವಾರ 10.25 ಕೋಟಿ ರೂಪಾಯಿ ಹಾಗೂ ಭಾನುವಾರ 11 ಕೋಟಿ ರೂಪಾಯಿ ಅನ್ನು ಈ ಚಿತ್ರ ಗಳಿಕೆ ಮಾಡಿದೆ. ಈ ಮೂಲಕ ಸಿನಿಮಾದ ಒಟ್ಟೂ ಗಳಿಕೆ 29.55 ಕೋಟಿ ರೂಪಾಯಿ ಆಗಿದೆ. ಅಂದರೆ ಸರಿ ಸುಮಾರು 30 ಕೋಟಿ ರೂಪಾಯಿ ಚಿತ್ರ ಗಳಿಕೆ ಮಾಡಿದಂತೆ ಆಗಿದೆ.

