ಮಂಗಳೂರು: ಮಂಗಳೂರಿನಲ್ಲಿ ಕೇಂದ್ರ ಸಚಿವ, ಮಲಯಾಳಂ ಚಿತ್ರನಟ ಸುರೇಶ್ ಗೋಪಿ ತುಳುವಿನಲ್ಲಿ ಭಾಷಣ ಆರಂಭಿಸಿದರು. ತುಳುವಿನಲ್ಲಿ ಮಾತನಾಡುವ ಮೂಲಕ ಕರಾವಳಿಗರ ಗಮನವನ್ನು ಸುರೇಶ್ ಗೋಪಿ ಸೆಳೆದರು. “ಮಾತೆರೆಗ್ಲಾ ನಮಸ್ಕಾರ, ಎಂಚ ಉಲ್ಲರ್, ಸೌಖ್ಯ?” ಎಂದು ತುಳುವಿನಲ್ಲಿ ಆತ್ಮೀಯವಾಗಿ ಮಾತನಾಡಿದರು.

“ದೇವೆರ್ನ ಆಶೀರ್ವಾದ ಮಾತೆರೆಗ್ಲಾ ಇಪ್ಪಡ್” ಎಂದು ತುಳುವಿನಲ್ಲೇ ಶುಭ ಹಾರೈಸಿದರು. ಬಿಜೆಪಿ ಮಂಗಳೂರು ವಿಭಾಗದ ವತಿಯಿಂದ ಆಯೋಜಿಸಿದ್ದ ಬೃಹತ್ ಪಾದಯಾತ್ರೆ ಹಾಗೂ ಸಾರ್ವಜನಿಕ ಸಮಾವೇಶದಲ್ಲಿ ಭಾಷಣ ಮಾಡಿದರು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಭಾಗಿಯಾದರು.

ನಗರದ ಕಾರ್ಯಕ್ರಮದಲ್ಲಿ “ಪ್ರಜಾಪ್ರಭುತ್ವವನ್ನು ಉಳಿಸಿ, ಅರಾಜಕತೆ ಅಳಿಸಿ” ಎಂಬ ಘೋಷವಾಕ್ಯದೊಂದಿಗೆ ಆಯೋಜನೆಯಾಗಿತ್ತು. ತುಳುವಿನ ಮೂಲಕ ಕರಾವಳಿಗರೊಂದಿಗೆ ಆತ್ಮೀಯತೆಯನ್ನು ಸುರೇಶ್ ಗೋಪಿ ಹಂಚಿಕೊಂಡರು.