ಮುಂಬೈ: ಇಬ್ಬರು ಯುವಕರು ಅನುಮಾನಾಸ್ಪದವಾಗಿ ಸಲ್ಮಾನ್ ಖಾನ್ ಅವರ ಫಾರ್ಮ್ಹೌಸ್ಗೆ ನುಗ್ಗಲು ಪ್ರಯತ್ನಿಸಿರುವ ಘಟನೆ ಪನ್ವೇಲ್ನಲ್ಲಿ ನಡೆದಿದೆ.
ಪನ್ವೇಲ್ನಲ್ಲಿ ಅವರ ಫಾರ್ಮ್ಹೌಸ್ ಕಾಂಪೌಂಡ್ ಒಳಗೆ ನುಸುಳಲು ಪ್ರಯತ್ನಿಸುತ್ತಿದ್ದ ಇಬ್ಬರು ಸಿಕ್ಕಿ ಬಿದ್ದಿದ್ದಾರೆ. ಬಳಿಕ ಭದ್ರತಾ ಸಿಬ್ಬಂದಿಯು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಅಭಿಮಾನಿಗಳು ಎಂದು ಹೇಳಿಕೊಂಡು ಬಂದ ಈ ಇಬ್ಬರನ್ನು ಅಜೇಶ್ ಕುಮಾರ್ ಓಂಪ್ರಕಾಶ್ ಗಿಲ್ ಹಾಗೂ ಗುರುಸೇವಕ್ ಸಿಂಗ್ ಎಂದು ಗುರುತಿಸಿಲಾಗಿದೆ.
ಅವರಿಬ್ಬರ ಆಧಾರ್ ಕಾರ್ಡ್ ಪರಿಶೀಲನೆ ಮಾಡಿದಾಗ ಅವು ನಕಲಿ ಆಧಾರ್ ಕಾರ್ಡ್ ಎಂಬುದು ತಿಳಿದು ಬಂದಿದೆ. ಮಹೇಶ್ ಕುಮಾರ್ ಮತ್ತು ವಿನೋದ್ ಕುಮಾರ್ ಎಂಬ ಹೆಸರಿನಲ್ಲಿ ಅವರು ನಕಲಿ ಆಧಾರ್ ಕಾರ್ಡ್ ಸಿದ್ಧಪಡಿಸಿಕೊಂಡು ಮೋಸ ಮಾಡಲು ಪ್ರಯತ್ನಿಸಿದ್ದಾರೆ.
ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಈಗಾಗಲೇ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್, ಗೋಲ್ಡಿ ಬ್ರಾರ್ ಮುಂತಾದವರು ಬೆದರಿಕೆ ಹಾಕಿದ್ದಾರೆ.