ಬಾಲಿವುಡ್‌ ನಟಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ಕುಟುಂಬಕ್ಕೆ ಮತ್ತೊಬ್ಬ ಅತಿಥಿಯ ಆಗಮನವಾಗುತ್ತಿದೆ. 2025ರ ಜುಲೈ 15ರಂದು ತಮ್ಮ ಮೊದಲ ಮಗಳನ್ನು ಬರಮಾಡಿಕೊಂಡಿದ್ದ ದಂಪತಿ, ಈಗ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಈ ಸಂತಸದ ವಿಚಾರವನ್ನು ದಂಪತಿ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಕಿಯಾರಾ ಅಡ್ವಾಣಿ, ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಪುತ್ರಿ ಸರಯಾ ಕೈಯಲ್ಲಿ ಪುಟ್ಟ ಮಗುವಿನ ಕಾಲುಚೀಲ ಹಿಡಿದಿರುವ ಫೋಟೊವನ್ನು ಪೋಸ್ಟ್ ಮಾಡಿದ್ದಾರೆ.

ಅದರ ಜೊತೆಗೆ, ‘ನಮ್ಮ ಬದುಕಿಗೆ ಮತ್ತೊಮ್ಮೆ ಶ್ರೇಷ್ಠ ಉಡುಗೊರೆ ಸಿಕ್ಕಿದೆ. ನಮ್ಮ ಮನಸ್ಸು ಪ್ರೀತಿ ಮತ್ತು ಕೃತಜ್ಞತೆಯಿಂದ ತುಂಬಿ ತುಳುಕುತ್ತಿದೆ’ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳಿಂದ ಅಭಿನಂದನೆಗಳ ಸುರಿಮಳೆಯೇ ಹರಿದುಬರುತ್ತಿದೆ.