ಕ್ರೇಜಿ ಸ್ಟಾರ್ ಸಿನಿಮಾ ಪ್ರೀತಿಗೆ ಸಾಟಿ ಇಲ್ವೇ ಇಲ್ಲ. ಸಿನಿಮಾವನ್ನ ಜೀವಿಸೋ ರವಿಚಂದ್ರನ್ ಈ ವಯಸ್ಸಿನಲ್ಲೂ ಹೊಸ ಪ್ರೇಮಲೋಕದ ಕನಸು ಕಾಣುತ್ತಿದ್ದಾರೆ. ಮತ್ತೊಂದು ದೊಡ್ಡ ಸಾಹಸದ ಕನಸು ಕಂಡಾಗಿದೆ. ಈ ಕನಸುಗಾರನ ಜನ್ಮ ದಿನದಂದು ಕ್ರೇಜಿಯ ಕ್ರೇಜಿಯೆಸ್ಟ್ ವಿಷಯದ ಒಂದಷ್ಟು ಫ್ಯಾಕ್ಟ್ಸ್ ಇಲ್ಲಿದೆ.
ಕ್ರೇಜಿ ಸ್ಟಾರ್ ರವಿಚಂದ್ರನ್ ಸಿನಿಮಾವನ್ನ ಎಷ್ಟು ಪ್ರೀತಿಸ್ತಾರೋ..? ಅಷ್ಟೇ ಪ್ರೀತಿಯನ್ನೂ ಪ್ರೇಮಿಸುತ್ತಾರೆ. ತಮ್ಮ ಪ್ರತಿ ಚಿತ್ರದಲ್ಲಿ ಪ್ರೀತಿಯನ್ನ, ಸೌಂದರ್ಯವನ್ನ ವಿಶೇಷವಾಗಿ ಕೊಡ್ತಾನೇ ಬಂದಿದ್ದಾರೆ. ರಣಧೀರ ಚಿತ್ರದಲ್ಲಿ ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು ಅಂತ ಹೇಳಿ ಬಿಟ್ಟಿದ್ದರು.
ಸಿನಿಮಾ ಶೂಟಿಂಗ್ ಆರಂಭ ಆದ ಕೆಲವೇ ಸಮಯದಲ್ಲಿ ಅವರಿಗೆ ಸಿನಿಮಾ ಯಶಸ್ಸು ಕಾಣುವುದಿಲ್ಲ ಎನ್ನುವ ಸೂಚನೆ ಸಿಕ್ಕಿತ್ತು. ಕೆಲವು ದಿನಗಳ ಶೂಟಿಂಗ್ ಆಗಲೇ ಪೂರ್ಣಗೊಂಡಿತ್ತು. ಆದಾಗ್ಯೂ ಈ ಚಿತ್ರವನ್ನು ನಿಲ್ಲಿಸೋ ಆಲೋಚನೆಯನ್ನು ರವಿಚಂದ್ರನ್ ಮಾಡಿದ್ದರು. ‘ಶಾಂತಿ ಕ್ರಾಂತಿ ನಿಲ್ಲಿಸೋಣ ಎಂದುಕೊಂಡೆ. ಆಗಲೇ ಒಂದಷ್ಟು ಕೋಟಿ ರೂಪಾಯಿ ಖರ್ಚು ಮಾಡಿದ್ದೆ. ನಾನು ಅಂದುಕೊಂಡಂಗೆ ಸಿನಿಮಾ ಆಗ್ತಿಲ್ಲ. ಎಲ್ಲರ ಇಮೇಜ್ ಬೇರೆ ಬೇರೆ ಇದೆ. ಕಥೆ ಅಂದುಕೊಂಡಂತೆ ಬರ್ತಿಲ್ಲ. ಸಿನಿಮಾನ ನಿಲ್ಲಿಸಿ ಬಿಡ್ತೀನಿ ಎಂದು ತಂದೆಗೆ ಹೇಳಿದ್ದೆ’ ಎಂದು ಅವರು ಹಳೆಯ ಘಟನೆ ನೆನಪಿಸಿಕೊಂಡಿದ್ದರು.
ಈ ಸಿನಿಮಾಗೆ ಹಾಕಿದ ಬಜೆಟ್ನ ತೀರೀಸೋಕೆ ರವಿಚಂದ್ರನ್ಗೆ ಹಿಡಿದಿದ್ದು ಬರೋಬ್ಬರಿ 15 ವರ್ಷಗಳು. ಸುಮಾರು ವರ್ಷಗಳ ಕಾಲ ಈ ಸಿನಿಮಾಗಾಗಿ ಮಾಡಿದ ಸಾಲ ತೀರಿಸುವುದರಲ್ಲೇ ಅವರು ಕಳೆದರು. ‘ ಆ ಬಗ್ಗೆ ನೋವಿಲ್ಲ. ಎಲ್ಲಾ ಸಾಲವನ್ನು ತೀರಿಸಿದೆ. ಬಡ್ಡಿ ಕಡಿಮೆ ಮಾಡಿಲ್ಲ ಎಂದು ಕೇಳಿಲ್ಲ’ ಎಂದು ರವಿಚಂದ್ರನ್ ಅವರು ಹೇಳಿಕೊಂಡಿದ್ದರು.

