ಮಂಡ್ಯ: ತಿಥಿ ಸಿನಿಮಾ ಚಿತ್ರದ ಸಿಂಗ್ರೀಗೌಡ (100)ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಸ್ವಗ್ರಾಮ ಸಿಂಗ್ರೇಗೌಡನಕೊಪ್ಪಲು ಗ್ರಾಮದಲ್ಲಿ ಕೊನೆಯುಸಿರೆಳೆದಿದ್ದಾರೆ.

ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ಚಿತ್ರ ತಿಥಿ ಸಿನಿಮಾದ ನಟ.ತಿಥಿ ಸಿನಿಮಾ ಮೂಲಕ ಸೆಂಚುರಿಗೌಡ ಅಂತಾನೇ ಫೇಮಸ್ ಆಗಿದ್ದರು. ತನ್ನ ನ್ಯಾಚರಲ್ ಡೈಲಾಗ್, ನಟನೆ ಮೂಲಕವೇ ಚಿತ್ರ ರಸಿಕರನ್ನ ರಂಜಿಸುತ್ತಿದ್ದರು.

ಕೆಲ ತಿಂಗಳ ಹಿಂದೆ ಬಿದ್ದು ಸೊಂಟದ ಮೂಳೆ ಮುರಿದಿತ್ತು. ವಯೋಸಹಜ ಖಾಯಿಲೆಯಿಂದಲೂ ಬಳಲುತ್ತಿದ್ದರು. ತಿಥಿ, ತರ್ಲೆ ವಿಲೇಜ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ ಛಾಪು ಮೂಡಿಸಿದ್ದರು.ಇಂದು ಮಧ್ಯಾಹ್ನ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.