ರಾಕಿಂಗ್ ಸ್ಟಾರ್ ಯಶ್ ನಟಿಸಿ, ನಿರ್ಮಿಸಿರುವ ಟಾಕ್ಸಿಕ್ ಸಿನಿಮಾ ಮತ್ತೊಂದು ರಣರೋಚಕ ಟೀಸರ್ ರಿಲೀಸ್ ಆಗಿದೆ. `ರಾಯ’ ಪಾತ್ರದ ಅನಾವರಣ ಮಾಡಿದ್ದ ಟೀಸರ್ ಬಳಿಕ ಮತ್ತೊಂದು ಆಕರ್ಷಕ ಟೀಸರ್ ರಿಲೀಸ್ ಇಂದು ಆಗಿದೆ.
ಈ ಟೀಸರ್‌ನಲ್ಲಿ ಯಶ್ ಎರಡು ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಭರ್ಜರಿ ಆಕ್ಷನ್, ಮಾಸ್ ಲುಕ್ ಹೊರಬಿದ್ದಿದೆ. ಈ ಸಲ ಯುದ್ಧನೇ ಬೇರೆ ಎನ್ನುತ್ತಾ ಆರಂಭವಾದ ಟೀಸರ್. ಬುಲೆಟ್ ಶಬ್ದ, ಫೈರಿಂಗ್, ತಂತ್ರ, ಕುತಂತ್ರ, ಜ್ವಾಲೆ, ಸೇಡಿನಿಂದ ಕೂಡಿದ 1.54 ಸೆಕೆಂಡ್‌ನಲ್ಲಿ ಯಶ್ ದೈತ್ಯ ಲುಕ್‌ನ ದರ್ಶನವಾಗಿದೆ. ಒಟ್ಟು 6 ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದ್ದು, ಮಾ.19ರಂದು ತೆರೆಗೆ ಬರಲಿದೆ.

