ಡಾಲಿ ಪಿಚ್ಚರ್ಸ್ ಮತ್ತು ತ್ರಿಶೂಲ್ ವಿಜನರಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ಅಭಿನಯದ ಜಿಂಗೋ ಚಿತ್ರದ ಸೆಕೆಂಡ್ ಲುಕ್ ಪೋಸ್ಟರ್ ಅನ್ನು ನಟ ಧನಂಜಯ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದೆ.
ಕಳೆದ ವರ್ಷ ಬಿಡುಗಡೆಯಾದ ಚಿತ್ರದ ಅನೌನ್ಸ್ಮೆಂಟ್ ವಿಡಿಯೋಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಚರ್ಚೆಯನ್ನು ಸೃಷ್ಟಿಸಿತು, ಡಾಲಿ ಧನಂಜಯ ಅವರ ಜಿಂಗೋ ಮೋನೋಲಾಗ್ ಮತ್ತು ಅದರ ಜೊತೆಗಿನ ಸಂಗೀತ ನರ ನರ ಜಿಂಗೋ ಜನರ ಮೆಚ್ಚುಗೆ ಪಡೆಯಿತು.
ಪ್ರೇಕ್ಷಕರ ಅಗಾಧ ಪ್ರತಿಕ್ರಿಯೆಯಿಂದ ಉತ್ಸಾಹಗೊಂಡ ಚಿತ್ರ ನಿರ್ಮಾಪಕರು ಕಥೆಯ ವ್ಯಾಪ್ತಿ ಮತ್ತು ಚಿತ್ರದ ಕ್ಯಾನ್ವಾಸ್ ಅನ್ನು ಗಣನೀಯವಾಗಿ ವಿಸ್ತರಿಸಿದ್ದಾರೆ. ಸಣ್ಣ ಪಟ್ಟಣದ ಕಥೆಯಾಗಿ ಆರಂಭವಾದದ್ದು ಇದೀಗ ಚಿತ್ರ ತನ್ನ ಕ್ಯಾನ್ವಾಸ್ ಅನ್ನು ವಿಸ್ತರಿಸಿಕೊಂಡಿದ್ದು ಒಂದು ಅಪ್ಪಟ ದೊಡ್ಡ ಪರದೆ ವೀಕ್ಷಣೆಗೆ ಸರಿಹೊಂದುವಂತೆ ದೃಶ್ಯಾವಳಿಗಳನ್ನು ಹೆಣೆಯಲಾಗಿದೆ.

