ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಸಿಕ್ಕಿದ್ದು, ನೆಲ್ಸನ್ ನಿರ್ದೇಶನದ ‘ಜೈಲರ್- 2’ ಸಿನಿಮಾ ರಿಲೀಸ್‌ಗೆ ಕೊನೆಗೂ ದಿನಾಂಕ ನಿಗದಿಯಾಗಿದೆ.

ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಬದಲು ದಸರಾ ಸಂಭ್ರಮದಲ್ಲಿ ಮುತ್ತುವೇಲ್ ಪಾಂಡಿಯನ್ ಆರ್ಭಟ ನಡೆಯಲಿದೆ. 3 ವರ್ಷಗಳ ಹಿಂದೆ ತೆರೆ ಕಂಡಿದ್ದ ʻಜೈಲರ್ʼ ಸಿನಿಮಾ 600 ಕೋಟಿಗೂ ಹೆಚ್ಚು ಹಣ ಬಾಚಿಕೊಂಡು ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಹೀಗಾಗಿ ‘ಜೈಲರ್’ ಸೀಕ್ವೆಲ್ ಮಾಡಬೇಕು ಎಂದು ಅಭಿಮಾನಿಗಳು ಬಯಸಿದ್ದರು. ಅದಕ್ಕೆ ತಕ್ಕಂತೆ ಕಳೆದ ವರ್ಷ ಸಿನಿಮಾ ಘೋಷಣೆ ಆಗಿತ್ತು.

ಅಕ್ಟೋಬರ್ 15ಕ್ಕೆ ಸಿನಿಮಾ ತೆರೆಗೆ ಬರುವುದು ಖಚಿತವಾಗಿದೆ. ಚಿತ್ರತಂಡ ಸಣ್ಣ ಟೀಸರ್ ಮೂಲಕ ರಿಲೀಸ್ ಡೇಟ್ ಘೋಷಣೆ ಮಾಡಿದೆ. ಮೊದಲ ಭಾಗಕ್ಕಿಂತ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿರುವುದು ಟೀಸರ್‌ನಲ್ಲಿ ತೋರಿಸಿದೆ.

ಸನ್ ಪಿಕ್ಚರ್ಸ್ ಸಂಸ್ಥೆ ನಿರ್ಮಾಣದ ಚಿತ್ರದಲ್ಲಿ ಶಿವರಾಜ್‌ ಕುಮಾರ್, ಮೋಹನ್ ಲಾಲ್ ಹಾಗೂ ಹೃತಿಕ್ ರೋಷನ್ ಅತಿಥಿ ಪಾತ್ರ ಮಾಡಿದ್ದಾರೆ. ಶಾರುಖ್ ಖಾನ್ ಚಿತ್ರದಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡ್ತಾರೆ ಎನ್ನುವ ಚರ್ಚೆ ನಡೆದಿತ್ತು. ಅಂತಿಮವಾಗಿ ಹೃತಿಕ್ ರೋಷನ್ ನಟಿಸಿ ಹೋಗಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ನರಸಿಂಹ ಆಗಿ ಈ ಬಾರಿ ಶಿವಣ್ಣನಿಗೆ ಕೊಂಚ ಹೆಚ್ಚು ದೃಶ್ಯಗಳು ಸಿಕ್ಕಿವೆ.

— Sun Pictures (@sunpictures) July 2, 2026