ಹಿಂದಿ ಚಿತ್ರರಂಗದ ಸಿನಿಮಾಗಳು ರೀ-ರಿಲೀಸ್ ಗೆ ತಯಾರಾಗುತ್ತಿದ್ದು, ಪಿವಿಆರ್ ಐನಾಕ್ಸ್ ಸಿನಿಮಾಸ್ ಕಡೆಯಿಂದ ‘ಜಿಂದಿಗಿ ನ ಮಿಲೇಗಿ ದೋಬಾರಾ’ ಸಿನಿಮಾ ರೀ-ರಿಲೀಸ್ ಮಾಡುವ ಘೋಷಣೆ ಆಗಿದೆ.
ನಿರ್ದೇಶಕಿ ಜೋಯಾ ಅಖ್ತರ್ ನಿರ್ದೇಶಿಸಿದ ಈ ಚಿತ್ರ ರಿಲೀಸ್ ಆಗಿ 13 ವರ್ಷಗಳು ಕಳೆಯುತ್ತಾ ಬಂದಿವೆ. ಜೊತೆಗೆ ಜೋಯಾ ಅಖ್ತರ್ ಅವರ ನಿರ್ದೇಶನದ ಇತರ ಸಿನಿಮಾಗಳು ರಿಲೀಸ್ ಆಗಿವೆ.
‘ಜಿಂದಗಿ ನ ಮಿಲೇಗಿ ದೋಬಾರಾ’ ಸಿನಿಮಾದಲ್ಲಿ ಹೃತಿಕ್ ರೋಷನ್, ಕತ್ರಿನಾ ಕೈಫ್, ಫರ್ಹಾನ್ ಅಖ್ತರ್, ಅಭಯ್ ಡಿಯೋಲ್, ಕಲ್ಕಿ ಕೋಕ್ಲಿನ್ ಸೇರಿ ಅನೇಕರು ನಟಿಸಿದ್ದರು.
ಬೆಂಗಳೂರಿನಲ್ಲಿ ಕೋರಮಂಗಲ, ಮೈಸೂರು ರಸ್ತೆ ಹಾಗೂ ಡೈರೆಕ್ಟರ್ಸ್ ಕಟ್ ಫೋರಂ ರೆಕ್ಸ್ ವಾಕ್ನಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಇವುಗಳ ಜೊತೆಗೆ ‘ತಲಾಶ್’, ‘ಗಲ್ಲಿಬಾಯ್’, ‘ದಿಲ್ ದಡಕ್ನೇದೋ’ ಸಿನಿಮಾಗಳು ಕೂಡ ಪಿವಿಆರ್ನಲ್ಲಿ ಪ್ರದರ್ಶನ ಕಾಣಲಿವೆ.
‘ಜಿಂದಗಿ ನ ಮಿಲೇಗಿ ದೋಬಾರಾ’ ಸಿನಿಮಾ ಜೀವನದ ಜರ್ನಿ ಬಗ್ಗೆ ಈ ಚಿತ್ರ ಇತ್ತು. ಹಾಸ್ಯ, ಮೋಜು ಮಸ್ತಿಯಲ್ಲಿ ಸಾಗುವ ಸಿನಿಮಾದ ಕಥೆ ಅಭಿಮಾನಿಗಳಿಗೆ ಸಖತ್ ಇಷ್ಟ ಆಗಿತ್ತು.

