ಸ್ಯಾಂಡಲ್ವುಡ್ ಖ್ಯಾತ ನಟ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಕೃಷ್ಣಂ ಪ್ರಣಯ ಸಖಿ’ ಇಂದು ಬಿಡುಗಡೆಯಾಗಿದೆ.
ನಿನ್ನೆ ರಾತ್ರಿ ಪ್ರೀಮಿಯರ್ ಆಯೋಜಿಸಿದ್ದು, ಸ್ಯಾಂಡಲ್ವುಡ್ ನಟ ಹಾಗೂ ನಟಿಯರು ಸಿನಿಮಾ ವೀಕ್ಷಿಸಿ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಈ ಮೂಲಕ ನಟ ಗಣೇಶ್ ಕೃಷ್ಣಂ ಪ್ರಣಯ ಸಖಿಗೆ ಬಿಗ್ ಓಪನಿಂಗ್ ಪಡೆಯೋ ಎಲ್ಲಾ ಸೂಚನೆ ಕೊಟ್ಟಿದೆ. ಶ್ರೀನಿವಾಸ್ ರಾಜು ನಿರ್ದೇಶನದಲ್ಲಿ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ಮೂಡಿ ಬಂದಿದೆ.
ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರದಲ್ಲಿ 8 ನಾಯಕಿಯರ ಜೊತೆಗೆ ಆ್ಯಕ್ಟ್ ಮಾಡಿದ್ದಾರೆ. ಇದು ಇಲ್ಲಿವರೆಗಿನ ಹೈಯೆಸ್ಟ್ ನಂಬರ್ ಅಂತಲೂ ಸ್ವತಃ ಗಣೇಶ್ ಹೇಳಿಕೊಂಡಿದ್ದಾರೆ. ಈ ಚಿತ್ರದಲ್ಲಿ ಫ್ಯಾಮಿಲಿ ಡ್ರಾಮಾ ಜೊತೆಗೆ ಒಂದಷ್ಟು ವಿಶೇಷ ಕಂಟೆಂಟ್ ಕೂಡ ಇದೆ.
ಈ ಹಾಡುಗಳಿಂದಲೇ ಸಿನಿಮಾ ತಂಡ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವ ಪ್ರಯತ್ನ ಮಾಡಿದೆ. ಈ ಮೂಲಕವೇ ಗೋಲ್ಡನ್ ಸ್ಟಾರ್ ನಟನೆಯ ಈ ಸಿನಿಮಾದ ಕುರಿತು ಎಲ್ಲೆಡೆ ಪ್ರಶಂಸೆ ಹಾಗೂ ಮೆಚ್ಚುಗೆಯ ಸುರಿಮಳೆ ಮೂಡಿತ್ತು. ಗೋಲ್ಡನ್ ಸ್ಟಾರ್ ಗಣೇಶ, ಮಾಳವಿಕ ನಾಯರ್, ಶರಣ್ಯ ಶೆಟ್ಟಿ, ಶಶಿ ಕುಮಾರ್, ಗಿರೀಶ್ ಶಿವಣ್ಣ, ರಂಗಾಯಣ ರಘು, ಸಾಧು ಕೋಕಿಲಾ, ಕುರಿ ಪ್ರತಾಪ್ ಮುಂತಾದ ತಾರಾ ಬಳಗ ಹೊಂದಿದೆ.

