ಜ್ಞಾನವೇಲ್ ರಾಜ್ ನಿರ್ಮಾಣದ, ಪಾ ರಂಜಿತ್ ನಿರ್ದೇಶನದ ಹಾಗೂ ಚಿಯಾನ್ ವಿಕ್ರಮ್ ಅಭಿನಯದ ‘ತಂಗಲಾನ್ʼ ಚಿತ್ರವು ಇಂದು ಆಗಸ್ಟ್ 15 ಜಗತ್ತಿನಾದ್ಯಂತ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ನಿರ್ದೇಶಕ ಮಣಿರತ್ನಂ ನಿರ್ದೇಶನದಲ್ಲಿ ಎರಡು ಭಾಗಗಳಲ್ಲಿ ತೆರೆಕಂಡ ‘ಪೊನ್ನಿಯಿನ್ ಸೆಲ್ವನ್’ ಚಿತ್ರ ವಿಕ್ರಮ್ ಗೆ ಮತ್ತೆ ಹಿಟ್ ಆಗಿತ್ತು .ಇದೀಗ ‘ತಂಗಾಲನ್’ ಅದ್ಭುತವಾದ ಸಿನಿಮಾ, ಕೆಲವು ಅದ್ಭುತ ದೃಶ್ಯಗಳನ್ನು ಪಾ ರಂಜಿತ್ ಕಟ್ಟಿಕೊಟ್ಟಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ ಸಿನಿ ರಸಿಕರು.
ʻʻಈ ಚಿತ್ರವನ್ನು ಹಾಲಿವುಡ್ ಗುಣಮಟ್ಟದಲ್ಲಿ ಚಿತ್ರೀಕರಿಸಲಾಗಿದೆ. ನಿರ್ದೇಶಕ ಪಾ.ರಂಜಿತ್ ಬಗ್ಗೆ ಹೇಳಲು ಪದಗಳಿಲ್ಲ. ಅದೇ ರೀತಿ ನಟ ವಿಕ್ರಮ್ ಕೂಡ ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ತೋರಿಸಿದ್ದಾರೆʼ ಎಂದು ಅಭಿಮಾನಿಯೊಬ್ಬರು ಬರೆದುಕೊಂಡಿದ್ದಾರೆ.
ವಿಜಯ್ ಅಭಿಮಾನಿಯೊಬ್ಬ ಟ್ವೀಟ್ ಮಾಡಿ, ‘2024ರಲ್ಲಿ ಈವರೆಗೆ ಬಿಡುಗಡೆ ಆದ ಸಿನಿಮಾಗಳಲ್ಲಿ ಇದು ಅತ್ಯುತ್ತಮ ಸಿನಿಮಾ. ಈ ಸಿನಿಮಾದ ನಟನೆಗೆ ಚಿಯಾನ್ ವಿಕ್ರಂಗೆ ಪ್ರಶಸ್ತಿ ನೀಡಬೇಕು. ಜಿವಿ ಪ್ರಕಾಶ್ ಸಂಗೀತ ಅತ್ಯದ್ಭುತ. ಎಲ್ಲ ಕ್ರೆಡಿಟ್ ಹೋಗಬೇಕಿರುವುದು ನಿರ್ದೇಶಕ ಪಾ ರಂಜಿತ್ಗೆ. ಎಂದಿನಂತೆ ಪಾ ರಂಜಿತ್ ನಿರ್ದೇಶನ ಅದ್ಭುತವಾಗಿತ್ತು. ದ್ವಿತೀಯಾರ್ಧ ನನಗೆ ಹೆಚ್ಚು ಇಷ್ಟವಾಯ್ತು’ ಎಂದಿದ್ದಾರೆ. ಸಿನಿಮಾ ನೋಡಿರುವ ಬಹುತೇಕ ನೆಟ್ಟಿಗರು ‘ತಂಗಲಾನ್’ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ.

