News Karnataka Kannada
Monday, April 29 2024
ತೆಲುಗು

ವಿವಾದಾತ್ಮಕ ಹೇಳಿಕೆಗೆ ಸ್ಪಷ್ಟನೆ ನೀಡಿದ ಸಾಯಿ ಪಲ್ಲವಿ!

Sai Pallavi
Photo Credit : Wikimedia

ವಿರಾಟಪರ್ವಂ ಸಿನಿಮಾ ಸಂದರ್ಶನವೊಂದರಲ್ಲಿ ಕಾಶ್ಮೀರಿ ಫೈಲ್ಸ್‌ ಹಾಗೂ ಗೋಹತ್ಯೆ ಹೋಲಿಕೆ ಕುರಿತು ನಟಿ ಸಾಯಿ ಪಲ್ಲವಿ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿದ್ದತ್ತು. ಇದೀಗ ಆ ವಿಚಾರದ ಬಗ್ಗೆ ನಟಿ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್‌ ಮಾಡಲಾಗಿದ್ದು, ವಿವರಣೆ ನೀಡಿದ್ದಾರೆ.

ʻನಾನು ಆ ಸಂದರ್ಶನದಲ್ಲಿ ಹಿಂಸೆ ಬಗ್ಗೆ ಮಾತನಾಡಿದ್ದೇನೆ. ನನಗೆ ಹಿಂಸೆ ಅಂದರೆ ಆಗುವುದಿಲ್ಲ, ಅದನ್ನು ಸಂಪೂರ್ಣವಾಗಿ ವಿರೋಧ ಮಾಡುವ ಅದರ ಬಗ್ಗೆ ಮಾತ್ರ ಮಾತನಾಡಿದ್ದೇನೆ. ನನ್ನ ಮಾತುಗಳನ್ನು ಕ್ಲಿಪ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಸಂದರ್ಶನವನ್ನು ಪೂರ್ತಿಯಾಗಿ ನೋಡಿದರೆ ನಾನು ಯಾಕೆ ಆ ಕಾಮೆಂಟ್ ಮಾಡಿದೆ ಎಂಬುದು ಅರ್ಥವಾಗುತ್ತದೆ ಎಂದಿದ್ದಾರೆ.

ಕೇವಲ ಕ್ಲಿಪ್ಪಿಂಗ್ ನೋಡಿ ಈ ರೀತಿ ಟ್ರೋಲ್ ಮಾಡುವುದು ಸರಿಯಲ್ಲ. ನಾನು ಎಂಬಿಬಿಎಸ್‌ ಓದಿದ್ದೇನೆ. ನನಗೆ ಎಲ್ಲರ ಜೀವವೂ ಮುಖ್ಯ ಎಂದು ನಂಬಿದ್ದೇನೆ. ಮತ್ತೊಬ್ಬರ ಪ್ರಾಣವನ್ನು ತೆಗೆದುಕೊಳ್ಳುವ ಹಕ್ಕು ನಮಗಿಲ್ಲ. ನಾನು ಮಾತನಾಡುವಾಗ ತಟಸ್ಥವಾಗಿ ಮಾತನಾಡುತ್ತೇನೆ. ನನ್ನ ಮಾತುಗಳನ್ನು ಇಷ್ಟ ಬಂದಂತೆ ಬೇರೆ ರೀತಿಯಲ್ಲಿ ಅರ್ಥಿಸಿರುವುದು ನಿಜಕ್ಕೂ ಬೇಸರವಾಗಿದೆʼ.  ಈ ವಿಚಾರದಲ್ಲಿ ನನ್ನ ಜೊತೆಗಿದ್ದ ಎಲ್ಲರಿಗೂ ಧನ್ಯವಾದ ಎಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು