Categories: ತೆಲುಗು

ಸಾಯಿ ಧರ್ಮ್ ತೇಜ್ ಅಪಘಾತಕ್ಕೆ ಅತಿ ವೇಗ ಕಾರಣ: ಪೊಲೀಸರು

ಹೈದರಾಬಾದ್: ಶುಕ್ರವಾರ ರಾತ್ರಿ ಬೈಕ್ ಅಪಘಾತದಲ್ಲಿ ತೀವ್ರ ಗಾಯಗೊಂಡು ಹೈದರಾಬಾದ್ ಜುಬಿಲಿ ಹಿಲ್ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತೆಲುಗು ನಟ ಸಾಯಿ ಧರ್ಮ್ ತೇಜ್ ಅಪಘಾತಕ್ಕೆ ಅತಿ ವೇಗವೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಮಾಧಾಪುರ್ ಕೇಬಲ್ ಸೇತುವೆ ಮೇಲೆ ತೇಜ್ ಚಲಾಯಿಸುತ್ತಿದ್ದ ಕ್ರೀಡಾ ಬೈಕ್ ಉರುಳಿ ಬಿದ್ದು, ಅವರಿಗೆ ಕೈಕಾಲು, ಪಕ್ಕೆಲುಬು ಸೇರಿದಂತೆ ದೇಹದ ನಾನಾ ಕಡೆ ಗಂಭೀರ ಗಾಯಗಳಾಗಿದ್ದವು. ಅವರು ಮಾಧಾಪುರ್ ಕೇಬಲ್ ಸೇತುವೆ ಮೇಲೆ ಬೈಕ್‌ನ್ನು ಗಂಟೆಗೆ 80 ಕಿಮೀ ವೇಗದಲ್ಲಿ ಚಲಾಯಿಸುತ್ತಿದ್ದದ್ದೇ ಅಪಘಾತವಾಗಲು ಕಾರಣ. ಈ ಸೇತುವೆ ಮೇಲೆ ಅಧಿಕ ವೇಗ ನಿಷೇಧಿಸಲಾಗಿದೆ. ಗಂಟೆಗೆ 40 ಕಿಮೀ ವೇಗದಲ್ಲಿ ವಾಹನ ಚಲಾಯಿಸಲು ಮಾತ್ರ ಅವಕಾಶ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದೊಂದು ದುರದೃಷ್ಟಕರ ಘಟನೆ, ನಿಗದಿತ ವೇಗಕ್ಕಿಂತ ತೇಜ್ ಅವರು ಅಧಿಕ ವೇಗದಲ್ಲಿ ಬೈಕ್ ಚಲಾಯಿಸಿದ್ದರು. ಅಲ್ಲದೇ ಹೆಲ್ಮೆಟ್‌ ಕೂಡ ಸರಿಯಾಗಿ ಹಾಕಿರಲಿಲ್ಲ ಎಂದು ಸೈಬರಾಬಾದ್ ಪೊಲೀಸರು ತಿಳಿಸಿದ್ದಾರೆ.

ನಿರ್ಲಕ್ಷ್ಯತನದಿಂದ ವಾಹನ ಸವಾರಿ ಮಾಡಿದ್ದಕ್ಕೆ ಸಾಯಿ ಧರ್ಮ ತೇಜ್ ಅವರ ಮೇಲೆ ಐಪಿಸಿ ಕಲಂ 336 ಮತ್ತು 279 ಅಡಿ ಸೈಬರಾಬಾದ್ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ರಾಯದುರ್ಗಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Sampriya YK

Recent Posts

ಯುವಕನೊಬ್ಬ ಎಂಟು ಬಾರಿ ಮತ ಚಲಾಯಿಸಿದ ವೀಡಿಯೊ ವೈರಲ್

ಯುವಕನೋರ್ವ ಬಿಜೆಪಿ ಅಭ್ಯರ್ಥಿಗೆ ಎಂಟು ಬಾರಿ ಮತಹಾಕಿರುವ ಘಟನೆ ಉತ್ತರ ಪ್ರದೇಶದ ಇಟಾ ಜಿಲ್ಲೆಯ ನಯಾ ಗಾಂವ್ ಪಟ್ಟಣದಲ್ಲಿ ನಡೆದಿದೆ.…

3 mins ago

ʻಮೋದಿಗೆ ಯಾರೂ ವೋಟ್ ಹಾಕಬೇಡಿ’ ಎಂದಿದ್ದ ಶಿಕ್ಷಕ ಅರೆಸ್ಟ್‌

ಯಾರು ಮೋದಿಗೆ ವೋಟ್​ ಹಾಕಬೇಡಿ ಎಂದು ಶಾಲಾ ಮಕ್ಕಳಿಗೆ ಹೇಳಿದ್ದ ಸರ್ಕಾರಿ ಶಾಲೆಯ ಶಿಕ್ಷಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ…

17 mins ago

ರೇವ್‌ ಪಾರ್ಟಿ ಮೇಲೆ ಪೊಲೀಸ್‌ ದಾಳಿ : ತೆಲುಗು ನಟಿ, ಮಾಡೆಲ್​ ಸಿಸಿಬಿ ವಶಕ್ಕೆ

ಸಿಸಿಬಿ ಪೊಲೀಸರು ರಾಜಧಾನಿಯಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಯೊಂದರ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಆಂಧ್ರಪ್ರದೇಶದಿಂದ ತೆಲುಗು ನಟಿಯರನ್ನು ಕರೆಸಿಕೊಂಡು…

30 mins ago

ಜೂನಿಯರ್ ಎನ್​ಟಿಆರ್ ಜನ್ಮದಿನ : ಸ್ಟಾರ್ ಹೀರೋಗೆ ಕನ್ನಡದ ಬಗ್ಗೆ ವಿಶೇಷ ಪ್ರೀತಿ

ಜೂನಿಯರ್ ಎನ್​ಟಿಆರ್ ಅವರಿಗೆ ಇಂದು ಹುಟ್ಟುಹಬ್ಬ ಸಂಭ್ರಮ.ಈ ವಿಶೇಷ ದಿನದಂದು ಸೆಲೆಬ್ರಿಟಿಗಳು, ಕುಟುಂಬದವರು, ಅಭಿಮಾನಿಗಳು ನಟನಿಗೆ ಶುಭಾಶಯ ಬರುತ್ತಿದೆ. ಜೂನಿಯರ್…

47 mins ago

ಮಲ್ಲಮ್ಮ ಜಯಂತಿಗೆ ಅಗೌರವ : ರೆಡ್ಡಿ ಸಮಾಜ ಪದಾಧಿಕಾರಿಗಳ ಪ್ರತಿಭಟನೆ

ಚಿಟಗುಪ್ಪ'ತಾಲ್ಲೂಕಿನ ನಿರ್ಣಾ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಗೌರವ…

1 hour ago

ಮಳೆಯಿಂದ​ ಪಂದ್ಯ ರದ್ದು : ರಾಯಲ್ಸ್​ ವಿರುದ್ಧ ರಾಜಸ್ಥಾನ್​ ಕಣಕ್ಕೆ

17ನೇ ಆವೃತ್ತಿಯ ಐಪಿಎಲ್​ನ ಕೊನೆಯ ಲೀಗ್​ ಪಂದ್ಯ ಮಳೆಯಿಂದ ರದ್ದುಗೊಂಡಿದೆ. ರಾಜಸ್ಥಾನ್​ ರಾಯಲ್ಸ್​ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್ತಂಡಗಳು ಈ…

1 hour ago