News Karnataka Kannada
Saturday, May 18 2024
ಮಹಾರಾಷ್ಟ್ರ

ವಯೋಸಹಜ ಕಾಯಿಲೆಗಳಿಂದ ತೆಲುಗು ಹಿರಿಯ ನಟ ಎಂ. ಬಾಲಯ್ಯ ನಿಧನ

Photo Credit : Twitter

ಮುಂಬೈ:  ವಯೋಸಹಜ ಕಾಯಿಲೆಗಳಿಂದ ತೆಲುಗು ಹಿರಿಯ ನಟ ಎಂ. ಬಾಲಯ್ಯ ಅವರು ಇಂದು ಬೆಳಿಗ್ಗೆ ಹೈದರಾಬಾದ್‌ನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ಅವರಿಗೆ 94 ವರ್ಷ ವಯಸ್ಸಾಗಿತ್ತು.

ಮನ್ನವ ಬಾಲಯ್ಯ ಅವರು ಟಾಲಿವುಡ್‌ನ ಹಲವಾರು ಸೂಪರ್ ಹಿಟ್ ಚಲನಚಿತ್ರಗಳಲ್ಲಿ ಹಿರಿಯರ ಪಾತ್ರ ಹಾಗೂ ಇತರ ಪ್ರಮುಖ ಪಾತ್ರಗಳಲ್ಲಿ ಜನಪ್ರಿಯರಾಗಿದ್ದರು.

ವಯೋಸಹಜ ಕಾಯಿಲೆಗಳಿಂದ ಬಾಲಯ್ಯ ನಿಧನರಾದರು. ಮೃತರು ಪುತ್ರ ಹಾಗೂ ನಟ ತುಳಸಿ ರಾಮ್ ಪ್ರಸಾದ್ ಅವರನ್ನು ಅಗಲಿದ್ದಾರೆ.

ಅನೇಕ ಟಾಲಿವುಡ್ ಗಣ್ಯರು ಅಗಲಿದ ಹಿರಿಯ ಚೇತನಕ್ಕೆ ಸಂತಾಪ ಸೂಚಿಸಿದ್ದಾರೆ. ಬಾಲಯ್ಯ ಅವರ ನಿಧನ ತೆಲುಗು ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎಂದು ನಟ ಹಾಗೂ ಶಾಸಕ ಬಾಲಕೃಷ್ಣ ಬಣ್ಣಿಸಿದ್ದಾರೆ.

ಬಾಲಯ್ಯ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಅವರು ಟಾಲಿವುಡ್‌ನಲ್ಲಿ ಬರಹಗಾರ, ನಿರ್ದೇಶಕ ಹಾಗೂ ನಿರ್ಮಾಪಕರೂ ಆಗಿದ್ದರು. ಇವರು ಗುಂಟೂರು ಜಿಲ್ಲೆಯ ಅಮರಾವತಿ ಮಂಡಲದ ಚವುಪಾಡು ಎಂಬಲ್ಲಿ ಮನ್ನವ ಗುರವಯ್ಯ ಚೌಧರಿ ಹಾಗೂ ಅನ್ನಪೂರ್ಣಮ್ಮ ದಂಪತಿಗೆ ಜನಿಸಿದರು. ಬಾಲಯ್ಯ 1958 ರಲ್ಲಿ ಎತ್ತುಕು ಪೈ ಎತ್ತು ಚಿತ್ರದ ಮೂಲಕ ನಟನಾಗಿ ಪಾದಾರ್ಪಣೆ ಮಾಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು