ಸ್ಯಾಂಡಲ್‌ವುಡ್‌ನ ಕಾಟೇರ ಡೈರೆಕ್ಟರ್ ತರುಣ್ ಸುಧೀರ್ ತಮ್ಮ ಜೀವನ ಸಂಗಾತಿ ಯಾರು ಅನ್ನೋದನ್ನ ಅಧಿಕೃತವಾಗಿಯೇ ಅನೌನ್ಸ್ ಮಾಡಿದ್ದಾರೆ.
ತಮ್ಮ ಎಂದಿನ ಸಿನಿಮಾ ಶೈಲಿಯಲ್ಲಿಯೇ ಭಾವಿ ಪತ್ನಿ ಸೋನಲ್ ಮೊಂಥೆರೋ ಬಗ್ಗೆ ಹೇಳಿದ್ದಾರೆ. ಇಲ್ಲಿವರೆಗೂ ಈ ಸುದ್ದಿ ಸುದ್ದಿಯಾಗಿಯೇ ಹರಿದಾಡಿತ್ತು. ಇದರ ಬಗ್ಗೆ ಸೋನಲ್ ಮತ್ತು ತರುಣ್ ನಕ್ಕು ಸುಮ್ಮನಾಗುತ್ತಿದ್ದರು. ಆದರೆ, ಇದೀಗ ಸೋನಲ್ ನನ್ನ ಜೀವನದ ಹೀರೋಯಿನ್ ಅನ್ನೋದನ್ನ ಸ್ವತಃ ತರುಣ್ ಸುಧೀರ್ ಹೇಳಿಕೊಂಡಿದ್ದಾರೆ. ಈ ಮೂಲಕ ತಾವು ದಾಂಪತ್ಯ ಜೀವನಕ್ಕೆ ಕಾಲಿಡ್ತಿರೋ ವಿಚಾರವನ್ನೂ ಅಧಿಕೃತವಾಗಿಯೇ ತಿಳಿಸಿದ್ದಾರೆ.

ಈ ವಿಡಿಯೋ ಸಖತ್ ವೈರಲ್ ಆಗಿದೆ. ಇದು ಎಲ್ಲ ಗಮನ ಸೆಳೆಯುತ್ತಿದೆ. ಆಗಸ್ಟ್ 10-11ರಂದು ಇವರ ವಿವಾಹ ನೆರವೇರಲಿದೆ.

