ಕನ್ನಡದ ಖ್ಯಾತ ನಿರ್ದೇಶಕ ತರುಣ್‌ ಸುಧೀರ್‌ ಹಾಗೂ ಸೋನಲ್‌ ಮೊಂಥೆರೋ ಅವರ ಕ್ರಿಶ್ಚಿಯನ್‌ ಸಂಪ್ರದಾಯದ ಮದುವೆಯ ಸಿದ್ದತೆಗಳು ಆರಂಭವಾಗಿದೆ.ಹಿಂದೂ ಸಂಪ್ರದಾಯದಲ್ಲಿ ಮದೆವೆಗೂ ಪೂರ್ವ ಮೆಹಂದಿ ಸಂಪ್ರದಾಯ ನಡೆಯುವಂತೆ, ಕ್ರಿಶ್ಚಿಯನ್‌ ಮದುವೆಗಳಲ್ಲಿ ರೋಸ್‌ ಸಂಪ್ರದಾಯ ನಡೆಯುತ್ತಿದೆ. ನಾಲ್ಕು ದಿನಗಳಗಳ ಹಿಂದೆ ಈ ಕಾರ್ಯಕ್ರಮ ಕೂಡ ನೆರವೇರಿದೆ.

ಕನ್ನಡ ನಿರ್ದೇಶಕ ತರುಣ್ ಸುಧೀರ್ ಹಾಗೂ ಸೋನಲ್ ಮೊಂಥೆರೋ ಅವರು ಮಂಗಳೂರಿನಲ್ಲಿ ಕ್ರಿಶ್ಚಿಯನ್ ಪದ್ಧತಿ ಪ್ರಕಾರ ಮದುವೆ ಆಗುತ್ತಿದ್ದಾರೆ. ಮದುವೆ ಪೂರ್ವ ಕಾರ್ಯಕ್ರಮದ ಫೋಟೋಗಳು ಕೂಡ ವೈರಲ್‌ ಆಗಿದೆ.ರೋಸ್ ಸಮಾರಂಭವು ಸಾಂಪ್ರದಾಯಿಕ ಮಂಗಳೂರಿನ ಕ್ಯಾಥೋಲಿಕ್ ಪೂರ್ವ-ವಿವಾಹದ ಆಚರಣೆಯಾಗಿದ್ದು, ಇದು ವಧು ಮತ್ತು ವರನಿಗೆ ತೆಂಗಿನ ಹಾಲು ಮತ್ತು ಎಣ್ಣೆಯಿಂದ ಅಭಿಷೇಕವನ್ನು ಮಾಡಿ ಹಿರಿಯರು ಆಶೀರ್ವಾದ ಮಾಡುತ್ತಾರೆ.

ಸೆಪ್ಟೆಂಬರ್‌ 1 ರಂದು ವಿವಾಹ ಸಮಾರಂಭ ಮಂಗಳೂರಿನ ಪಡೀಲ್‌ ಬಳಿಯ ಚರ್ಚ್‌ವೊಂದರಲ್ಲಿ ನಡೆಯಲಿದೆ ಎಂದು ವರದಿಯಾಗಿದ್ದು, ಈ ಕುರಿತಾಗಿ ಮಾಹಿತಿ ಇನ್ನಷ್ಟೇ ಬರಬೇಕಿದೆ.