News Karnataka Kannada
Wednesday, May 01 2024
ತಮಿಳು

ತಮಿಳು ನಟ ವಿಶಾಲ್‌ಗೆ ಶೂಟಿಂಗ್ ವೇಳೆ ಗಾಯ: ಮತ್ತೊಮ್ಮೆ ಶೂಟಿಂಗ್‌ ಸ್ಥಗಿತ

Tamil actor Vishal injured while shooting, shooting halted once again
Photo Credit : Twitter

ಬಹುತೇಕ ಫೈಟ್ ಸೀಕ್ವೆನ್ಸ್ ಗಳಲ್ಲಿ ವಿಶಾಲ್ ಡ್ಯೂಪ್ ಇಲ್ಲದೆ ಮಾಡಿ ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದಾರೆ. ಈ ಪ್ರಕ್ರಿಯೆಯಲ್ಲಿ ಕೆಲವೊಮ್ಮೆ ಅಪಘಾತಗಳು ಸಂಭವಿಸುತ್ತವೆ. ಇಂತಹ ಆಕ್ಷನ್ ಸೀಕ್ವೆನ್ಸ್‌ಗಳಿಂದ ವಿಶಾಲ್ ಈಗಾಗಲೇ ಹಲವು ಬಾರಿ ಗಾಯಗೊಂಡಿದ್ದಾರೆ.

ಇದೀಗ ಮತ್ತೊಮ್ಮೆ ಗಾಯಗೊಂಡು ಚಿತ್ರದ ಶೂಟಿಂಗ್‌ ಸ್ಥಗಿತಗೊಂಡಿದೆ. ವಿಶಾಲ್ ಸದ್ಯ ಲಾಠಿ ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಾರೆ.  ಈ ಚಿತ್ರದ ಶೂಟಿಂಗ್ ಹೈದರಾಬಾದ್ ನಲ್ಲಿ ನಡೆಯುತ್ತಿದ್ದು, ಈ ಹಿಂದೆಯೂ ಶೂಟಿಂಗ್ ವೇಳೆ ವಿಶಾಲ್ ಗಾಯಗೊಂಡಿದ್ದರು.

ಹಾಗಾಗಿ ಕೆಲ ದಿನಗಳ ಕಾಲ ಚಿತ್ರೀಕರಣ ಸ್ಥಗಿತಗೊಂಡಿತ್ತು. ಬಳಿಕ ಇದೇ ಚಿತ್ರದ ಶೂಟಿಂಗ್ ವೇಳೆ ವಿಶಾಲ್ ಮತ್ತೊಮ್ಮೆ ಗಂಭೀರವಾಗಿ ಗಾಯಗೊಂಡಿದ್ದರು. ಇದೀಗ ‘ಲಾಠಿ’ ಚಿತ್ರದ ಕ್ಲೈಮ್ಯಾಕ್ಸ್ ಫೈಟ್ ದೃಶ್ಯಗಳ ಚಿತ್ರೀಕರಣದ ವೇಳೆ ಅಪಘಾತದಲ್ಲಿ ವಿಶಾಲ್ ಗಾಯಗೊಂಡಿದ್ದರಿಂದ ಚಿತ್ರದ ಶೂಟಿಂಗ್ ಮುಂದಕ್ಕೆ ಹೋಗಿದೆ.

ವಿಶಾಲ್ ಶೀಘ್ರ ಗುಣಮುಖರಾಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು