ವಿದೇಶದಿಂದ ಕಾರ್ ಆಮದುಕೊಂಡಿದ್ದ ನಟ ದಳಪತಿ ವಿಜಯ್
ಕೋರ್ಟ್ ಆದೇಶದಂತೆ ದಂಡ ಪಾವತಿಸಿದ ನಟ ದಳಪತಿ ವಿಜಯ್.
ನಟ ದಳಪತಿ ವಿಜಯ್ ಅವರು ರೋಲ್ಸ್ ರಾಯ್ಸ್ ಕಾರ್ ಪ್ರವೇಶದ ಪೂರ್ತಿ ತೆರಿಗೆಯನ್ನು ಕಟ್ಟಿದ್ದಾರೆ. ಈ ಹಿಂದೆ ಅವರು ಮದ್ರಾಸ್ ಹೈಕೋರ್ಟ್ನಲ್ಲಿ ಅಬ್ರಾಡ್ನಿಂದ ತರಿಸಿಕೊಂಡ ದುಬಾರಿ ಕಾರಿಗೆ ತೆರಿಗೆ ಕಟ್ಟಲು ವಿನಾಯಿತಿ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದರು.
ತೆರಿಗೆ ವಿನಾಯಿತಿ ಕೇಳಿದ್ದಕ್ಕಾಗಿ ದಳಪತಿ ವಿಜಯ್ ಅವರ ಅರ್ಜಿ ವಿಚಾರಣೆ ದೊಡ್ಡ ಚರ್ಚೆಯಾಯ್ತು. ಆನಂತರದಲ್ಲಿ ಅವರಿಗೆ ನ್ಯಾಯಾಧೀಶರು 1 ಲಕ್ಷ ರೂಪಾಯಿ ದಂಡ ಕಟ್ಟುವಂತೆ ಹೇಳಿದರು. ಅಷ್ಟೇ ಅಲ್ಲದೆ ಕ್ಷಮೆ ಕೇಳುವಂತೆ ಹೇಳಿದ್ದರು. ನ್ಯಾಯಾಧೀಶರು ನೀಡಿದ ಕಟುವಾದ ಹೇಳಿಕೆ ವಿರುದ್ಧ ವಿಜಯ್ ಮತ್ತೊಂದು ಅರ್ಜಿ ಸಲ್ಲಿಸಿದ್ದರು.