News Karnataka Kannada
Sunday, April 28 2024
ಮನರಂಜನೆ

ಜಾಕ್ವೆಲಿನ್​ ಖಾಸಗಿ ವಿಡಿಯೋ ಲೀಕ್ ​ ಮಾಡುವುದಾಗಿ ಬೆದರಿಕೆ ಹಾಕಿದ ಸುಕೇಶ್

Sukesh threatens to leak Jacqueline's private video
Photo Credit : News Kannada

ಬೆಂಗಳೂರು:  200 ಕೋಟಿ ರೂಪಾಯಿ ವಂಚನೆ ಕೇಸ್​ನಲ್ಲಿ ಜೈಲು ಸೇರಿರುವ ಸುಕೇಶ್​ ಚಂದ್ರಶೇಖರ್​  ಜಾಕ್ವೆಲಿನ್​ ಫರ್ನಾಂಡಿಸ್​ ನ ಖಾಸಗಿ ವಿಡಿಯೋವನ್ನು ಲೀಕ್ ​ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ಸುಕೇಶ್​ ಚಂದ್ರಶೇಖರ್​ ಜೊತೆ ಜಾಕ್ವೆಲಿನ್​ ಫರ್ನಾಂಡಿಸ್​ ಅವರು ಕ್ಲೋಸ್​ ಆಗಿದ್ದರು. ಆದರೆ ಅವರಿಬ್ಬರ ಸಂಬಂಧ ರಹಸ್ಯವಾಗಿ ಉಳಿದುಕೊಂಡಿತ್ತು. ಸುಕೇಶ್​ ಚಂದ್ರಶೇಖರ್​ ಬಂಧನದ ಬಳಿಕ ವಿಚಾರಣೆ ವೇಳೆ ಅನೇಕ ಸತ್ಯಗಳು ಹೊರಬಂದವು.

ಕೆಲವೇ ದಿನಗಳ ಹಿಂದೆ ಜಾಕ್ವೆಲಿನ್​ ಫರ್ನಾಂಡಿಸ್​ ಅವರು ಕೋರ್ಟ್​ನಲ್ಲಿ ಒಂದು ಮನವಿ ಸಲ್ಲಿಸಿದ್ದರು. ಸುಕೇಶ್​​ಗೆ ಸಂಬಂಧಿಸಿದ ಕೇಸ್​ನಲ್ಲಿ ತಮ್ಮ ಹೆಸರನ್ನು ಕೈ ಬಿಡಬೇಕು ಎಂದು ಅವರು ಕೋರಿದ್ದರು. ಈ ವಿಷಯ ಗೊತ್ತಾದ ಬಳಿಕ ಸುಕೇಶ್​ ಚಂದ್ರಶೇಖರ್​ಈಗ ಸೇಡು ತೀರಿಸಿಕೊಳ್ಳುವ ರೀತಿಯಲ್ಲಿ ಸಂದೇಶ ರವಾನಿಸುತ್ತಿದ್ದಾನೆ.

ತಮ್ಮ ಮತ್ತು ಜಾಕ್ವೆಲಿನ್​ ಫರ್ನಾಂಡಿಸ್​ ನಡುವೆ ವಿನಿಮಯ ಆದ ವಾಟ್ಸಪ್​ ಸಂದೇಶಗಳನ್ನು ಆತ ಲೀಕ್​ ಮಾಡಿದ್ದಾನೆ. ಇದು ಬರೀ ಟೀಸರ್​ ಮಾತ್ರ. ನೂರಾರು ಚಾಟ್​ಗಳು, ಖಾಸಗಿ ವಿಡಿಯೋಗಳು, ವಾಯ್ಸ್​ ರೆಕಾರ್ಡಿಂಗ್ಸ್​ ಇವೆ. ಇದನ್ನು ತನಿಖಾಧಿಕಾರಿಗಳಿಗೆ ನೀಡದ ಹೊರತು ಬೇರೆ ಯಾವುದೇ ಆಯ್ಕೆ ತನ್ನ ಬಳಿ ಈಗ ಉಳಿದಿಲ್ಲ ಎಂದು ಸುಕೇಶ್​ ಚಂದ್ರಶೇಖರ್​ ಹೇಳಿರುವುದಾಗಿ ವರದಿ ಆಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು