ಸ್ಯಾಂಡಲ್‌ವುಡ್ ಕಿಚ್ಚ ಸುದೀಪ್ ಮತ್ತು ಅನೂಪ್ ಭಂಡಾರಿ ಮತ್ತೊಂದು ಚಿತ್ರ ಮಾಡುತ್ತಿದ್ದಾರೆ. ವಿಕ್ರಾಂತ್ ರೋಣ ಚಿತ್ರ ಬಂದು ಇದೀಗ ಎರಡು ವರ್ಷ ಆಗಿದೆ. ಇಷ್ಟು ಗ್ಯಾಪ್‌ನ ಬಳಿಕ ಈ ಜೋಡಿ ಇನ್ನೂ ಒಂದು ಚಿತ್ರ ಮಾಡುತ್ತಿದೆ.
ಈ ಚಿತ್ರಕ್ಕೆ ಏನು ಹೆಸರು ಅನ್ನೋದು ರಿವೀಲ್ ಆಗಿಲ್ಲ. ಆದರೆ, ಕಿಚ್ಚ ಸುದೀಪ್ ಜೊತೆಗೆ ಇನ್ನೂ ಒಂದು ಚಿತ್ರ ಮಾಡುತ್ತಿದ್ದೇನೆ ಅಂತ ಸ್ವತಃ ಅನೂಪ್ ಬರೆದುಕೊಂಡಿದ್ದಾರೆ. ಸುದೀಪ್ ಅವರ ಜನ್ಮ ದಿನದಂದು ಸೆಪ್ಟೆಂಬರ್-2 ರಂದು ಈ ಸಿನಿಮಾದ ಇತರ ಮಾಹಿತಿಯನ್ನ ಕೊಡೋದಾಗಿಯೇ ಹೇಳಿಕೊಂಡಿದ್ದಾರೆ. ಬೆಳಗ್ಗೆ 10 ಗಂಟಗೆ ಈ ಚಿತ್ರ ಇತರ ವಿಚಾರ ರಿವೀಲ್ ಮಾಡೋದಾಗಿಯೇ ಈಗಲೇ ಹೇಳಿಕೊಂಡಿದ್ದಾರೆ.
ಸುದೀಪ್ ಚಿತ್ರಕ್ಕಾಗಿಯೇ ಡೈರೆಕ್ಟರ್ ಅನೂಪ್ ಭಂಡಾರಿ ಕಥೆ ಮಾಡುತ್ತಿದ್ದಾರೆ. ಮ್ಯಾಕ್ಸ್ ಚಿತ್ರ ಅನೌನ್ಸ್ ಆಗೋ ಮೊದಲೇ ಈ ತಯಾರಿ ನಡೆದಿತ್ತು. ಆದರೆ, ಸುದೀಪ್ ಮ್ಯಾಕ್ಸ್ ಚಿತ್ರವನ್ನ ಒಪ್ಪಿಕೊಂಡರು. ಅದನ್ನ ಈಗ ಮುಗಿಸಿದ್ದಾರೆ. ಅದು ಇನ್ನೇನು ರಿಲೀಸ್ ಹಂತಕ್ಕೂ ಬಂದಿದೆ. ಬಹುಶಃ ಅತೀ ಶೀಘ್ರದಲ್ಲಿಯೇ ರಿಲೀಸ್ ಡೇಟ್ ಕೂಡ ರಿವೀಲ್ ಆಗಬಹದು.
It's an honour to be associating with @KicchaSudeep sir once again. There is another exciting collaboration and an exciting announcement on Sep 2nd @ 10 AM. ಸುದೀಪ್ ಸರ್ ಹುಟ್ಟುಹಬ್ಬದ ದಿನ ಮತ್ತೆ ಭೇಟಿ ಆಗೋಣ! Be Ready Boys #BRBMovie pic.twitter.com/xsitXPyNjR
— Anup Bhandari (@anupsbhandari) August 29, 2024

