ಜೆ ಪಿ ತುಮಿನಾಡ್ ನಿರ್ದೇಶನದ ‘ಸು ಫ್ರಮ್ ಸೋ’ ಸಿನಿಮಾದಲ್ಲಿ ಸಂಧ್ಯಾ ಅರಕೆರೆ ಭಾನು ಪಾತ್ರಕ್ಕೆ ಜೀವ ತುಂಬಿದ್ದರು. ರಂಗಭೂಮಿ ಹಿನ್ನಲೆ ಹೊಂದಿರುವ ನಟಿ ಸಂಧ್ಯಾ ಅರಕೆರೆ ಇದೀಗ ತುಂಬು ಗರ್ಭಿಣಿಯಾಗಿದ್ದಾರೆ.
ಸಂಧ್ಯಾ ಅರಕೆರೆ – ಶೋಧನ್ ಬಸ್ರೂರ್ ದಂಪತಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಬೇಬಿ ಬಂಪ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಗಮನ ಸೆಳೆದಿದ್ದಾರೆ.
ಕಳೆದ ತಿಂಗಳು ಸಂಧ್ಯಾ ಅರಕೆರೆ ಅವರ ಸೀಮಂತ ಶಾಸ್ತ್ರ ನೆರವೇರಿದೆ. ಅವರ ಕುಟುಂಬದವರು ಇದರಲ್ಲಿ ಭಾಗಿ ಆಗಿದ್ದರು. ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಾ ಇದ್ದಾರೆ. ಶೀಘ್ರವೇ ಅವರ ಕಡೆಯಿಂದ ಸಿಹಿ ಸುದ್ದಿ ಸಿಗಲಿದೆ.

